Home News ವಿಮಾನದ ಚಕ್ರಗಳಡಿ ಶವ ಪತ್ತೆ

ವಿಮಾನದ ಚಕ್ರಗಳಡಿ ಶವ ಪತ್ತೆ

United Airlines America

ವಿಮಾನದ (plane) ಚಕ್ರಗಳಡಿಯಲ್ಲಿ ವ್ಯಕ್ತಿಯ ಶವ ಪತ್ತೆಯಾದ ಪ್ರಕರಣ ಆತಂಕ ಉಂಟುಮಾಡಿದೆ. ಮಂಗಳವಾರ ಚಿಕಾಗೋದಿಂದ ಹವಾಯಿಯ ಕಹುಲುಯಿ ವಿಮಾನ ನಿಲ್ದಾಣಕ್ಕೆ ಬಂದ ಯುನೈಟೆಡ್ ಏರ್‌ಲೈನ್ಸ್ ಬೋಯಿಂಗ್ 787-10 ವಿಮಾನದ ಲ್ಯಾಂಡಿಂಗ್ ಗೇರ್ ವಿಭಾಗದಲ್ಲಿ ಈ ಶವ ಪತ್ತೆಯಾಗಿದೆ.

ಅಕ್ರಮ ವಲಸಿಗರು ವಿಮಾನದ ಲ್ಯಾಂಡಿಂಗ್ ಗೇರ್ ವಿಭಾಗದಲ್ಲಿ ಪ್ರಯಾಣಿಸಲು ಯತ್ನಿಸುವ ಪ್ರಕರಣಗಳು ಈ ಹಿಂದೆ ಹಲವು ಬಾರಿ ನಡೆದಿವೆ. ಈ ವ್ಯಕ್ತಿಯು ಹೇಗೆ ಚಕ್ರಗಳ ಬಳಿ ಬಂದಿರಬಹುದು ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ವಿಮಾನ ಟೇಕ್ ಆಫ್ ಆಗುತ್ತಿದ್ದ ವೇಳೆ ಈ ಭಾಗದಲ್ಲಿ ಶವ ಇರುವುದು ಕಂಡುಬಂದಿದೆ.

ಈ ಪ್ರಕರಣದಿಂದ ವಿಮಾನ ನಿಲ್ದಾಣದ ಕಾರ್ಯಾಚರಣೆಗಳಿಗೆ ಯಾವುದೇ ಅಡ್ಡಿ ಆಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಶವ ಪತ್ತೆಯಾದ ವ್ಯಕ್ತಿ ಅಕ್ರಮ ವಲಸಿಗನಾಗಿರಬಹುದೆಂದು ಶಂಕೆ ವ್ಯಕ್ತವಾಗಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version