
ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ (Steve Smith) ಇತಿಹಾಸ ಸೃಷ್ಟಿಸಿದ್ದಾರೆ. ಸೌತ್ ಆಫ್ರಿಕಾದ ವಿರುದ್ಧ 4ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಅವರು 66 ರನ್ ಬಾರಿಸಿ ಎರಡು ಮಹತ್ವದ ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಲಾರ್ಡ್ಸ್ನಲ್ಲಿ ಅತಿಹೆಚ್ಚು ರನ್ ಗಳಿಸಿದ ವಿದೇಶಿ ಆಟಗಾರ: ಸ್ಟೀವ್ ಸ್ಮಿತ್ ಈವರೆಗೆ ಲಾರ್ಡ್ಸ್ನಲ್ಲಿ 10 ಇನಿಂಗ್ಸ್ಗಳಲ್ಲಿ 591 ರನ್ ಗಳಿಸಿದ್ದು, ಈ ಮೈದಾನದಲ್ಲಿ ಅತಿಹೆಚ್ಚು ಟೆಸ್ಟ್ ರನ್ ಬಾರಿಸಿದ ವಿದೇಶಿ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಮೊದಲು ಈ ದಾಖಲೆ ವಾರೆನ್ ಬಾರ್ಡ್ಸ್ಲೆ ಅವರ ಹೆಸರಿನಲ್ಲಿ ಇತ್ತು (575 ರನ್).
ಇಂಗ್ಲೆಂಡ್ ನಲ್ಲಿ ಅತೀ ಹೆಚ್ಚು ಅರ್ಧಶತಕ ಗಳಿಸಿದ ವಿದೇಶಿ ಆಟಗಾರ: ಇಂದಿನ ಅರ್ಧಶತಕದೊಂದಿಗೆ, ಇಂಗ್ಲೆಂಡ್ನಲ್ಲಿ ಸ್ಮಿತ್ 43 ಇನಿಂಗ್ಸ್ಗಳಲ್ಲಿ 18 ಬಾರಿ 50 ಕ್ಕಿಂತ ಹೆಚ್ಚಿನ ರನ್ ಗಳಿಸಿದ್ದು, ಈ ವಿಭಾಗದಲ್ಲೂ ವಿದೇಶಿ ಆಟಗಾರರಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಈ ದಾಖಲೆ ಪೂರ್ವದಲ್ಲಿ ವೆಸ್ಟ್ ಇಂಡೀಸ್ನ ವಿವಿಯನ್ ರಿಚರ್ಡ್ಸ್ ಹೆಸರಿನಲ್ಲಿ ಇತ್ತು (17 ಅರ್ಧಶತಕ).
ಸ್ಟೀವ್ ಸ್ಮಿತ್ ಅವರ ಈ ಸಾಧನೆಗಳು ಕ್ರಿಕೆಟ್ ಕಾಶಿ ಲಾರ್ಡ್ಸ್ನಲ್ಲಿ ಅವರ ಹೆಸರು ಚಿರಸ್ಥಾಯಿಯಾಗಿಸುವಂತಿವೆ.