Home Karnataka ವಿರಾಟ್ ಕೊಹ್ಲಿಯ Pub ಮೇಲೆ FIR: ನಿಯಮ ಉಲ್ಲಂಘನೆ ಆರೋಪ

ವಿರಾಟ್ ಕೊಹ್ಲಿಯ Pub ಮೇಲೆ FIR: ನಿಯಮ ಉಲ್ಲಂಘನೆ ಆರೋಪ

FIR against Virat Kohli's pub

Bengaluru: ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ಸೇರಿದ ‘ಒನ್ 8 ಕಮ್ಯೂನ್’ ಪಬ್ (Virat Kohli’s pub) ಮೇಲೆ ಬೆಂಗಳೂರಿನಲ್ಲಿ FIR ದಾಖಲಾಗಿದೆ. ಕಸ್ತೂರ್ಬಾ ರಸ್ತೆಯಲ್ಲಿರುವ ಈ Pub ನಿಯಮ ಮೀರಿ ಕಾರ್ಯನಿರ್ವಹಿಸುತ್ತಿದ್ದ ಆರೋಪ ಎದುರಿಸಿದೆ.

ಪೊಲೀಸರು ಹೇಳುವಂತೆ, ಪಬ್‌ನಲ್ಲಿ ಪ್ರತ್ಯೇಕ ಸ್ಥಳವಿಲ್ಲದೆ ಧೂಮಪಾನಕ್ಕೆ ಅವಕಾಶ ನೀಡಲಾಗುತ್ತಿತ್ತು. ಇದರಿಂದ ಸಿಗರೇಟ್ ಮತ್ತು ತಂಬಾಕು ನಿಯಂತ್ರಣ ಕಾಯ್ದೆ (COTPA) ಉಲ್ಲಂಘನೆ ಆಗಿದೆ. ಮೇ 29ರಂದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಎನ್ಸಿಆರ್ ದಾಖಲಿಸಿದ್ದರು. ನಂತರ ನ್ಯಾಯಾಲಯದ ಅನುಮತಿಯೊಂದಿಗೆ ಎಫ್ಐಆರ್ ದಾಖಲಿಸಿದ್ದಾರೆ.

2024ರ ಜುಲೈನಲ್ಲಿ ಕೂಡ, ಸಮಯ ಮೀರಿ ಪಬ್‌ ನಡೆಸಿದ ಆರೋಪದಲ್ಲಿ ಇದೇ ಪಬ್‌ ಮೇಲೆ ಪ್ರಕರಣ ದಾಖಲಾಗಿತ್ತು. ಅಲ್ಲದೇ, ಡಿಸೆಂಬರ್‌ನಲ್ಲಿ BBMP ಸುರಕ್ಷತಾ ಕ್ರಮಗಳ ಕೊರತೆ ಮತ್ತು ಅಗ್ನಿಶಾಮಕ ಪ್ರಮಾಣಪತ್ರ ಇಲ್ಲದಿರುವ ಕುರಿತು ನೋಟಿಸ್ ನೀಡಿತ್ತು. ಈ ಎಲ್ಲಾ ಪ್ರಕರಣಗಳು ಸಾಮಾಜಿಕ ಕಾರ್ಯಕರ್ತರು ನೀಡಿದ ದೂರುಗಳ ಮೇರೆಗೆ ನಡೆದಿವೆ.

ಈ ನಡುವೆ ವಿರಾಟ್ ಕೊಹ್ಲಿ IPL ಟೂರ್ನಿಯಲ್ಲಿ ತೊಡಗಿಸಿಕೊಂಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಫೈನಲ್‌ಗೆ ಲಗ್ಗೆಯಿಟ್ಟಿದ್ದು, ಪಂಜಾಬ್ ಕಿಂಗ್ಸ್ ವಿರುದ್ಧ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಂಗಳವಾರ ಫೈನಲ್ ಆಡಲಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version