Home Entertainment Kantara ಸಿನಿಮಾ ಟಿಕೆಟ್ ದರದಲ್ಲಿ High Court ಮಧ್ಯಂತರ ತಡೆ

Kantara ಸಿನಿಮಾ ಟಿಕೆಟ್ ದರದಲ್ಲಿ High Court ಮಧ್ಯಂತರ ತಡೆ

High Court stays interim stay on ‘Kantara’ movie ticket price

ಕರ್ನಾಟಕದಲ್ಲಿ ಒಂದೇ ರೀತಿಯ ಸಿನಿಮಾ ಟಿಕೆಟ್ ದರವನ್ನು ಜಾರಿಗೆ ತರಲು ಸರ್ಕಾರ 200 ರೂ. ದರ ನಿಗದಿ ಮಾಡಿತ್ತು. ಆದರೆ, multiplexes ಹಾಗೂ ಹೊಂಬಾಳೆ ಫಿಲ್ಮ್ಸ್ ಈ ಆದೇಶವನ್ನು ಹೈಕೋರ್ಟ್‌ಗೆ ಪ್ರಶ್ನೆ ಮಾಡಿದ್ದರು. ಹೈಕೋರ್ಟ್ ಈಗ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ‘ಕಾಂತಾರ: ಚಾಪ್ಟರ್ 1’ ಚಿತ್ರದ ರಿಲೀಸ್ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ.

Multiplexe ನಲ್ಲಿ ಟಿಕೆಟ್ ದರ ಹೆಚ್ಚಾಗಿ ಜನರಿಗೆ ತೊಂದರೆ ಮಾಡುತ್ತಿತ್ತು. ಆದಕಾರಣ ಸರ್ಕಾರ ಟಿಕೆಟ್ ಬೆಲೆಗೆ ಕಡಿವಾಣ ಹಾಕಲು ಮುಂದಾಯಿತು. ಸೆಪ್ಟೆಂಬರ್ 12ರಂದು 200 ರೂ. ಟಿಕೆಟ್ ಬೆಲೆ ಜೊತೆಗೆ 18% ತೆರಿಗೆಯೊಂದಿಗೆ 236 ರೂ. ಕ್ಕಿಂತ ಹೆಚ್ಚು ದರ ಹಾಕಬಾರದೆಂದು ಆದೇಶ ಜಾರಿಗೆ ಬಂದಿತ್ತು. ಆದರೆ, ಎರಡು ವಾರಕ್ಕೂ ಈ ಆದೇಶಕ್ಕೆ ಹೈಕೋರ್ಟ್ ಬ್ರೇಕ್ ಬಿದ್ದಿದೆ.

‘ಕಾಂತಾರ: ಚಾಪ್ಟರ್ 1’ ಚಿತ್ರ ಅಕ್ಟೋಬರ್ 2ರಂದು ರಿಲೀಸ್ ಆಗಲಿದೆ. ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರಕ್ಕೆ 200 ರೂ. ಟಿಕೆಟ್ ಬೆಲೆಯಿಂದ ಹೆಚ್ಚಿನ ಕಲೆಕ್ಷನ್ ಆಗುವುದಿಲ್ಲವೆಂದು ನಿರ್ಮಾಪಕರು ಭಾವಿಸಿದ್ದರು. ಇದರಿಂದ ಹೊಂಬಾಳೆ ಫಿಲ್ಮ್ಸ್ ಮಲ್ಟಿಪ್ಲೆಕ್ಸ್ ಗಳೊಂದಿಗೆ ಸೇರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈಗ ಅವರ ಅರ್ಜಿ ಅಂಗೀಕಾರವಾಗಿದೆ.

ರಿಲೀಸ್ ದಿನ ಅಕ್ಟೋಬರ್ 2 ಗುರುವಾರ ಮತ್ತು ಗಾಂಧೀ ಜಯಂತಿ ರಾಜ್ಯ ರಜೆಯ ದಿನವಾಗಿದ್ದು, ಟಿಕೆಟ್ ಬೆಲೆ ಗಗನಕ್ಕೇರಬಹುದು. ಜೊತೆಗೆ ಶುಕ್ರವಾರ, ಶನಿವಾರ ಮತ್ತು ಭಾನುವಾರ ಕೂಡ ಟಿಕೆಟ್ ದರ ಹೆಚ್ಚಿರಲಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version