Search
WhatsApp alerts

Home › Karnataka

Ankola ದಲ್ಲಿ ಬೃಹತ್ ತಿಮಿಂಗಿಲ ಸಾವು: ಕಡಲಜೀವಿಗಳ ಸಾವು ಹೆಚ್ಚುತ್ತಿರುವ ಆತಂಕಕಾರಿ ಸ್ಥಿತಿ

administrator · Published

Huge whale found dead in Ankola

Ankola,Uttara Kannada: ಶೇಡಿಕುಳ್ಳಿ ಸಮುದ್ರತೀರದಲ್ಲಿ ಮಂಗಳವಾರ ಬೆಳಿಗ್ಗೆ ಬೃಹತ್ ತಿಮಿಂಗಿಲವೊಂದರ ಕಳೇಬರ ಪತ್ತೆಯಾಗಿದೆ. ಕೊಳೆತ ಸ್ಥಿತಿಯಲ್ಲಿರುವ ಈ ತಿಮಿಂಗಿಲ (whale) ಸುಮಾರು ಒಂದು ವಾರದ ಹಿಂದೆ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ.

ತಿಮಿಂಗಿಲದ ಕಳೇಬರವನ್ನು ಕಂಡ ಸ್ಥಳೀಯ ಮೀನುಗಾರರು ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ತಿಮಿಂಗಿಲ, ಡಾಲ್ಫಿನ್‌ಗಳಂತಹ ಕಡಲಜೀವಿಗಳ ಕಳೇಬರಗಳು ಆಗಾಗ ಪತ್ತೆಯಾಗುತ್ತಿದೆ.

  • 2023ರ ಮಾರ್ಚ್‌ನಲ್ಲಿ ಅಲಗೇರಿಯಲ್ಲಿ 40 ಅಡಿ ಉದ್ದದ ತಿಮಿಂಗಿಲ ಸತ್ತಿರುವುದು
  • ಗೋಕರ್ಣದ ಕಡಲತೀರದಲ್ಲಿ 25 ಅಡಿ ಉದ್ದದ ತಿಮಿಂಗಿಲ ಪತ್ತೆ
  • ಡಾಲ್ಫಿನ್ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಬಲೆಯ ತುಂಡುಗಳು ಕಂಡುಬಂದ ಘಟನೆ

ಡಾಲ್ಫಿನ್ ಸಾವಿಗೆ ಪ್ಲಾಸ್ಟಿಕ್ ಸೇವನೆ ಮುಖ್ಯ ಕಾರಣವೆಂದು ಅರಣ್ಯಾಧಿಕಾರಿ ಕೆ.ಡಿ. ನಾಯ್ಕ್ ತಿಳಿಸಿದ್ದಾರೆ. “ಪ್ಲಾಸ್ಟಿಕ್ ಬಳಕೆ ವಿರೋಧಿಸಿ ಜನರಲ್ಲಿ ಜಾಗೃತಿ ಮೂಡಬೇಕು,” ಎಂದಿದ್ದಾರೆ.

ಈ ಘಟನೆಗಳು ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ಕಡಲ ಮಾಲಿನ್ಯ, ಹವಾಮಾನ ಬದಲಾವಣೆ, ಮೀನುಗಾರಿಕೆ ಚಟುವಟಿಕೆಗಳು ಇವು ಕಡಲಜೀವಿಗಳ ಸಾವಿಗೆ ಕಾರಣವಾಗಿದೆಯೇ ಎಂಬ ಬಗ್ಗೆ ತಜ್ಞರಿಂದ ಸಮಗ್ರ ಅಧ್ಯಯನ ನಡೆಸಬೇಕು ಎಂಬುದು ಮೀನುಗಾರರು ಮತ್ತು ಸಾರ್ವಜನಿಕರ ಆಗ್ರಹವಾಗಿದೆ.

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page

Exit mobile version