Home Karnataka Bengaluru Urban BMTC ಸಿಬ್ಬಂದಿ ಮೇಲೆ ಹೆಚ್ಚಿದ ಹಲ್ಲೆ

BMTC ಸಿಬ್ಬಂದಿ ಮೇಲೆ ಹೆಚ್ಚಿದ ಹಲ್ಲೆ

BMTC Staff Assault

Bengaluru: ಬೆಂಗಳೂರು (Bengaluru)ನಗರದ BMTC ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣಗಳು ಮುಂದುವರಿಯುತ್ತಿವೆ. ನೃಪತುಂಗ ರಸ್ತೆಯಲ್ಲಿ BMTC ಬಸ್ ಚಾಲಕ ಕುಶಾಲ್ ಕುಮಾರ್ ಮೇಲೆ ಸ್ಕೂಟರ್​ಗೆ ಸೈಡ್ ನೀಡಿಲ್ಲ ಎಂಬ ಕಾರಣಕ್ಕೆ ಸವಾರನಿಂದ ಹಲ್ಲೆ ನಡೆದಿದೆ.

ನವೆಂಬರ್ 20ರಂದು ಮೆಜೆಸ್ಟಿಕ್ ನಿಂದ ಸಿಕೆ ಪಾಳ್ಯ ಕಡೆ ಹೊರಟಿದ್ದ BMTC ಬಸ್ (ರೂಟ್ ಸಂಖ್ಯೆ 365K/1, ಬಸ್ ನಂ. KA-57 F-0835) ನೃಪತುಂಗ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿ ಬಸ್ ಹತ್ತಿ, ಚಾಲಕನಿಗೆ ಕೊರಳಪಟ್ಟಿ ಹಿಡಿದು ಎಳೆಯುವ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಬಗ್ಗೆ ದೂರು ದಾಖಲಾಗಿದೆ. ನಿರ್ವಾಹಕ ಕೃಷ್ಣ ಮೇಲೂ ಹಲ್ಲೆ ಯತ್ನ ನಡೆದಿದೆ.

ಪ್ರಾಣ ಬೆದರಿಕೆ ಹಾಕಿ, ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಆರೋಪಿ ಮೊಹಮ್ಮದ್ ಫಜಲ್ ಎಂಬುದಾಗಿ ಗುರುತಿಸಲಾಗಿದೆ. ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಮೂರು ತಿಂಗಳಲ್ಲಿ BMTC ಸಿಬ್ಬಂದಿ ಮೇಲೆ 9ನೇ ಹಲ್ಲೆ ಪ್ರಕರಣ ಇದಾಗಿದೆ. ನವೆಂಬರ್ ತಿಂಗಳಲ್ಲೇ ನಾಲ್ಕು ಹಲ್ಲೆ ಪ್ರಕರಣಗಳು ದಾಖಲಾಗಿವೆ. ಸರ್ಕಾರ ಮತ್ತು ಪೊಲೀಸರು ಇಂತಹ ಪ್ರಕರಣಗಳನ್ನು ತಡೆಗಟ್ಟಲು ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version