Home News England ವಿರುದ್ಧ ಭಾರತದ ನಿರಾಸಾಜನಕ ಸೋಲು, Test ಇತಿಹಾಸದಲ್ಲಿ ಹೊಸ ಕೆಟ್ಟ ದಾಖಲೆ

England ವಿರುದ್ಧ ಭಾರತದ ನಿರಾಸಾಜನಕ ಸೋಲು, Test ಇತಿಹಾಸದಲ್ಲಿ ಹೊಸ ಕೆಟ್ಟ ದಾಖಲೆ

India's humiliating defeat against England, a new record in Test history

ಐದು ಪಂದ್ಯಗಳ ಟೆಸ್ಟ್ ಸರಣಿಯ (Test series) ಮೊದಲ ಪಂದ್ಯದಲ್ಲಿ ಭಾರತ ತಂಡ England ವಿರುದ್ಧ 5 ವಿಕೆಟ್‌ಗಳಿಂದ ಸೋಲನ್ನು ಅನುಭವಿಸಿದೆ. ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿದ ಭಾರತ, ಜೈಸ್ವಾಲ್, ಶುಭ್ಮನ್ ಗಿಲ್ ಮತ್ತು ಪಂತ್ ಅವರ ಶತಕದ ನೆರವಿನಿಂದ 471 ರನ್ ಗಳಿಸಿತು. ಪ್ರತಿಯಾಗಿ ಇಂಗ್ಲೆಂಡ್ 465 ರನ್ ಮಾಡಿ ಕೇವಲ 6 ರನ್ ಹಿಂದಿನಲ್ಲಿತ್ತು.

ದ್ವಿತೀಯ ಇನ್ನಿಂಗ್ಸ್‌ನಲ್ಲಿ, ರಾಹುಲ್ ಮತ್ತು ಪಂತ್ ಅವರ ಶತಕದ ನೆರವಿನಿಂದ ಭಾರತ 364 ರನ್ ಗಳಿಸಿತು ಮತ್ತು ಇಂಗ್ಲೆಂಡ್ಗೆ 371 ರನ್ ಗುರಿಯನ್ನು ನೀಡಿತು. ಆದರೆ ಇಂಗ್ಲೆಂಡ್, ಬೆನ್ ಡಕೆಟ್ ಶತಕ, ಕ್ರೌಲಿ ಮತ್ತು ಜೋ ರೂಟ್ ಅರ್ಧಶತಕಗಳೊಂದಿಗೆ 82 ಓವರ್‌ಗಳಲ್ಲಿ 373 ರನ್ ಮಾಡಿ ಗೆಲುವು ಸಾಧಿಸಿತು.

ಈ ಸೋಲಿನಿಂದಾಗಿ ಸರಣಿಯಲ್ಲಿ ಭಾರತ 1-0 ರ ಹಿನ್ನಡೆಗೆ ತಲುಪಿದೆ. ಹೆಡಿಂಗ್ಲಿಯಲ್ಲಿ ಇಂಗ್ಲೆಂಡ್ ಮಾಡಿದ ಈ 371 ರನ್ ಚೇಸ್, ತವರಿನಲ್ಲಿ ಇಂಗ್ಲೆಂಡ್ ಸಾಧಿಸಿರುವ ಎರಡನೇ ಅತಿ ದೊಡ್ಡ ಯಶಸ್ವಿ ರನ್ ಚೇಸ್ ಆಗಿದೆ.

ಟೆಸ್ಟ್ ಇತಿಹಾಸದಲ್ಲಿ ಕೇವಲ ನಾಲ್ಕು ಬಾರಿ ಮಾತ್ರ 800 ರನ್‌ಗಿಂತ ಹೆಚ್ಚಾಗಿ ಸಿಡಿಸಿ ತಂಡಗಳು ಸೋಲನ್ನು ಕಂಡಿವೆ. ಭಾರತ ಈಗ 854 ರನ್ ಗಳಿಸಿ ಸೋತ ನಾಲ್ಕನೇ ತಂಡವಾಗಿದೆ.

ಹೆಚ್ಚು ರನ್ ಗಳಿಸಿದ ಬಳಿಕ ಭಾರತಕ್ಕೆ ಇದು ಎರಡನೇ ಸೋಲು. ಮೊದಲದು 2008ರ ಸಿಡ್ನಿ ಟೆಸ್ಟ್‌ನಲ್ಲಿ ಆಗಿತ್ತು. ಈ ಪಂದ್ಯದಲ್ಲಿ ಐದು ಶತಕಗಳು ಬಂದರೂ, ಭಾರತ ಸೋತಿದ್ದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಂಭವಿಸಿದ ಅಂಶವಾಗಿದೆ.

ಐದು ಶತಕಗಳು, 854 ರನ್‌ಗಳೂ ಭಾರತವನ್ನು ರಕ್ಷಿಸಲಿಲ್ಲ. 148 ವರ್ಷದ ಟೆಸ್ಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಐದು ಶತಕಗಳ ನಂತರವೂ ಸೋಲಿದ್ದ ತಂಡ ಎಂಬ ಕೆಟ್ಟ ದಾಖಲೆ ಭಾರತಕ್ಕೆ ಸೇರಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version