Home Business ಉಕ್ಕು ಕೈಗಾರಿಕೆಯಲ್ಲಿ Carbon ಹೊರಸೂಸುವಿಕೆ ಕಡಿತಕ್ಕೆ ಸರ್ಕಾರದ ಬದ್ಧತೆ: Kumaraswamy

ಉಕ್ಕು ಕೈಗಾರಿಕೆಯಲ್ಲಿ Carbon ಹೊರಸೂಸುವಿಕೆ ಕಡಿತಕ್ಕೆ ಸರ್ಕಾರದ ಬದ್ಧತೆ: Kumaraswamy

'IOD Golden Peacock' award for industrial companies

Bengaluru: ಉಕ್ಕು ಮತ್ತು ಕೈಗಾರಿಕೆ ಕ್ಷೇತ್ರಗಳಲ್ಲಿ ಇಂಗಾಲ (carbon) ಹೊರಸೂಸುವಿಕೆಯನ್ನು ಶೂನ್ಯಮಟ್ಟಕ್ಕೆ ತಲುಪಿಸುವ ಗುರಿ ಸಾಧಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ (Kumaraswamy) ಹೇಳಿದರು.

ಬೆಂಗಳೂರುನಲ್ಲಿ ನಡೆದ ನಿರ್ದೇಶಕರ ಸಂಸ್ಥೆ (IOD) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂಗಾಲ ಹೊರಸೂಸುವಿಕೆ ತಗ್ಗಿಸಲು ಸಹಕರಿಸಿದ ಕೆಲ ಕೈಗಾರಿಕೆ ಸಂಸ್ಥೆಗಳಿಗೆ ‘ಗೋಲ್ಡನ್ ಪೀಕಾಕ್’ ಪ್ರಶಸ್ತಿ (IOD Golden Peacock) ನೀಡಿ ಗೌರವಿಸಿದರು.

  • ಭಾರತ ಜಾಗತಿಕ ಹಸಿರುಮನೆ ಅನಿಲ ಹೊರಸೂಸುವಿಕೆಯಲ್ಲಿ ಕೇವಲ 4% ಪಾಲು ಹೊಂದಿದ್ದರೂ, ಹವಾಮಾನ ಬದ್ಧತೆಗಳತ್ತ ಧೃಢ ನಿರ್ಧಾರದಿಂದ ಸಾಗುತ್ತಿದೆ.
  • ದೇಶದ ಪ್ರಗತಿ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಸುಸ್ಥಿರತೆ ಮುಖ್ಯವಾಗಿದೆ.
  • ಭಾರತದಲ್ಲಿ ತಲಾ ಇಂಗಾಲ ಹೊರಸೂಸುವಿಕೆ 1.89 ಟನ್‌ಗಳು ಮಾತ್ರವಿದ್ದು, ಇದು ಜಾಗತಿಕ ಸರಾಸರಿಗಿಂತ ಅರ್ಧಕ್ಕಿಂತ ಕಡಿಮೆ.
  • 2030ರ ವೇಳೆಗೆ 500 GW ಪಳೆಯುಳಿಕೆಯೇತರ (ನವೀಕರಿಸಬಹುದಾದ) ಇಂಧನ ಸಾಮರ್ಥ್ಯ ಮತ್ತು 2070ರ ವೇಳೆಗೆ ‘ನಿವ್ವಳ ಶೂನ್ಯ’ ಗುರಿ ಸಾಧಿಸಲು ಭಾರತ ಬದ್ಧವಾಗಿದೆ.

ಸಮಾರಂಭದಲ್ಲಿ ಹಲವಾರು ರಾಜತಾಂತ್ರಿಕರು, ಹಿರಿಯ ಅಧಿಕಾರಿಗಳು, ಕೈಗಾರಿಕೆ ಮತ್ತು ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಖಾಸಗಿ ವಲಯ ನಾವೀನ್ಯತೆ ಮತ್ತು ಹಸಿರು ಸಂಶೋಧನೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎಂದು ಸಚಿವರು ತಿಳಿಸಿದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version