Home News IPL 2025: ಸಮಯ ಮೀರಿ ಆಡಿದ Rajasthan Royals ಆಟಗಾರರಿಗೆ BCCI ದಂಡ

IPL 2025: ಸಮಯ ಮೀರಿ ಆಡಿದ Rajasthan Royals ಆಟಗಾರರಿಗೆ BCCI ದಂಡ

Rajasthan Royals

IPL 2025ರ 23ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಆಟವಾಡಿದ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡ ಸಮಯ ಮೀರಿದ ಕಾರಣ ಬಿಸಿಸಿಐ ದಂಡ ವಿಧಿಸಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ, ರಾಜಸ್ಥಾನ್ ತಂಡವು ನಿಗದಿತ 1 ಗಂಟೆ 30 ನಿಮಿಷಗಳ ಒಳಗೆ 20 ಓವರ್‌ಗಳನ್ನು ಪೂರ್ಣಗೊಳಿಸಿಲ್ಲ.

ಈ ಕಾರಣದಿಂದ, ತಂಡದ ನಾಯಕ ಸಂಜು ಸ್ಯಾಮ್ಸನ್‌ರಿಗೆ ₹24 ಲಕ್ಷ ದಂಡ ವಿಧಿಸಲಾಗಿದೆ. ಇದೇ ನಿಯಮದ ಅಡಿಯಲ್ಲಿ, ಈ ತಪ್ಪನ್ನು 2ನೇ ಬಾರಿಗೆ ಮಾಡಿದ ಕಾರಣ ಈ ಗರಿಷ್ಠ ದಂಡ ವಿಧಿಸಲಾಗಿದೆ.

ಸಾಮಾನ್ಯ ನಿಯಮಗಳು ಹೀಗಿವೆ

  • ಪ್ರತಿ ತಂಡವು 20 ಓವರ್‌ಗಳನ್ನು 1 ಗಂಟೆ 30 ನಿಮಿಷಗಳಲ್ಲಿ ಮುಗಿಸಬೇಕು.
  • ಸಮಯ ಮೀರೆದು ಆಟ ಆಡಿದರೆ, ಫೀಲ್ಡಿಂಗ್ ವೇಳೆ ಬೌಂಡರಿ ಬಳಿ ಇರುವ ಆಟಗಾರನನ್ನು 30-ಯಾರ್ಡ್ ಸರ್ಕಲ್‌ನ ಒಳಗೆ ಕರೆತರುವ ನಿಯಮ ಇದೆ.
  • 1ನೇ ಬಾರಿ ತಪ್ಪಾದರೆ ನಾಯಕನಿಗೆ ₹12 ಲಕ್ಷ ದಂಡ.
  • 2ನೇ ಬಾರಿ ತಪ್ಪಾದರೆ ₹24 ಲಕ್ಷ.
  • 3ನೇ ಬಾರಿ ಮತ್ತೆ ತಪ್ಪಾದರೆ ₹30 ಲಕ್ಷ ಹಾಗೂ 10 ಆಟಗಾರರಿಗೆ ತಲಾ ₹12 ಲಕ್ಷ ಅಥವಾ ಪಂದ್ಯ ಶುಲ್ಕದ 50% ದಂಡ ವಿಧಿಸಲಾಗುತ್ತದೆ.

ಇತರ ಆಟಗಾರರಿಗೆ ದಂಡ: ಈ ವೇಳೆ ರಾಜಸ್ಥಾನ್ ರಾಯಲ್ಸ್ ಪರ ಆಟವಾಡಿದ 10 ಆಟಗಾರರಿಗೆ ತಲಾ ₹6 ಲಕ್ಷ ಅಥವಾ ಪಂದ್ಯ ಶುಲ್ಕದ 25% ದಂಡ ವಿಧಿಸಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.

ಮುಂದಿನ ಬಾರಿ ಎಚ್ಚರ ಬೇಕು: ಇದೀಗ ಈ ದಂಡದ ಬಳಿಕ, ರಾಜಸ್ಥಾನ್ ರಾಯಲ್ಸ್ ಮುಂದಿನ ಪಂದ್ಯಗಳಲ್ಲಿ ನಿಗದಿತ ಅವಧಿಯಲ್ಲಿ ಓವರ್‌ಗಳನ್ನು ಮುಗಿಸಲು ಜಾಗೃತರಾಗಬೇಕಾಗಿದೆ. ಇಲ್ಲದಿದ್ದರೆ ಮೂರನೇ ಬಾರಿ ದಂಡ ಇನ್ನಷ್ಟು ಹೆಚ್ಚಾಗಲಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version