Home Karnataka Ramanagara ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ

ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ

Kanakapura Ramanagara Anganwadi Building Construction

Kanakapura, Ramanagara : ಕನಕಪುರ ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ ಹೊಸದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಣಕಡಬೂರು, ಸಾಲಬನ್ನಿ, ಬಾಳೆಪುರ ಗ್ರಾಮಗಳಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ (Anganwadi Building Construction) ಶುಕ್ರವಾರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್‌.ಬಸಪ್ಪ ಭೂಮಿಪೂಜೆ ಮಾಡಿದರು.

ಈ ಮೂರು ಗ್ರಾಮಗಳಲ್ಲಿ ಅಂಗನವಾಡಿ ಕಟ್ಟಡಗಳು ಶಿಥಿಲಗೊಂಡಿದ್ದು ಹಳೇ ಕಟ್ಟಡವನ್ನು ತೆರವುಗೊಳಿಸಲಾಗಿತ್ತು. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಹಾಗೂ ನರೇಗಾ ಹಣದಿಂದ ಅಂಗನವಾಡಿ ನಿರ್ಮಾಣ ಮಾಡಲಾಗುತ್ತಿದೆ. ಅಣಕಡಬೂರು ಮತ್ತು ಸಾಲಬನ್ನಿ ಗ್ರಾಮದಲ್ಲಿ ತಲಾ ₹10 ವೆಚ್ಚದಲ್ಲಿ ಕಾಮಗಾರಿ ನಡೆಯಲಿದ್ದು ಬಾಳೆಪುರ ಗ್ರಾಮದಲ್ಲಿ ₹21 ಲಕ್ಷದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದು PDO ಎನ್‌‌.ಎಸ್‌.ರಘು ತಿಳಿಸಿದರು.

ಹೊಸದುರ್ಗ ಗ್ರಾ. ಪಂ ಅಧ್ಯಕ್ಷೆ ಸವಿತ ಕೆ. ಕುಮಾರ್‌, ಸಾಲಬನ್ನಿ ರಾಜೇಂದ್ರ, ಅಣಕಡಬೂರು ಮಧು, ಕೆಂಪಮ್ಮ ಮುನಿಮಾರಯ್ಯ, ಬಾಳೆಪುರ ರಮೇಶ್‌, ಮಾದಪ್ಪ, ವಲಸಿ ಪುಟ್ಟಸ್ವಾಮಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version