Home Karnataka Chikkaballapura ವಿಷಯಾಧಾರಿತ ಕಲಿಕೋಪಕರಣ ಪ್ರದರ್ಶನ

ವಿಷಯಾಧಾರಿತ ಕಲಿಕೋಪಕರಣ ಪ್ರದರ್ಶನ

Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ಗುಂಡ್ಲ ಮಂಡಿಕಲ್ಲು ಗ್ರಾಮದ ಎನ್.ಎಸ್. ವಿದ್ಯಾನಿಕೇತನ ಶಾಲೆಯಲ್ಲಿ ಬುಧವಾರ ಮಂಡಿಕಲ್ಲು (Mandikal) ಕ್ಲಸ್ಟರ್ ಮಟ್ಟದ ವಿಷಯಾಧಾರಿತ ಕಲಿಕೋಪಕರಣ ಪ್ರದರ್ಶನ (Themed Art Exhibition) ಕಾರ್ಯಕ್ರಮ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ತಿಮ್ಮಪ್ಪ “ಯಾವುದೇ ವಿಷಯಕ್ಕೆ ಸಂಬಂಧಿಸಿದ ಕಲಿಕೋಪಕರಣಗಳನ್ನು ಮಕ್ಕಳಿಂದಲೇ ತಯಾರು ಮಾಡಿಸಿದಲ್ಲಿ ಆ ಮಗುವಿನ ಮಾನಸಿಕ ದೃಢತೆ ಹೆಚ್ಚುತ್ತದೆ ಮತ್ತು ಕೌಶಲ ತೋರ್ಪಡಿಸಲು ಸಾಧ್ಯ. ಮಗುವಿನ ಆಸಕ್ತಿ ಗಮನಿಸಿ ಅದೇ ವಿಷಯದಲ್ಲಿ ಮುಂದೆ ಬರುವಂತೆ ಪ್ರೋತ್ಸಾಹಿಸಬೇಕು” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ಗಂಗರಾಜು ಸೇರಿದಂತೆ ಶಿಕ್ಷಕರು, ಪೋಷಕರು ಪಾಲ್ಗೊಂಡಿದ್ದರು.

For Daily Updates WhatsApp ‘HI’ to 7406303366

The post ವಿಷಯಾಧಾರಿತ ಕಲಿಕೋಪಕರಣ ಪ್ರದರ್ಶನ appeared first on Chikkaballapur.

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version