Home News Cyprus ನಲ್ಲಿ ಮೋದಿ: 20 ವರ್ಷಗಳ ನಂತರ ಭಾರತೀಯ ಪ್ರಧಾನಿಯ ಭೇಟಿ

Cyprus ನಲ್ಲಿ ಮೋದಿ: 20 ವರ್ಷಗಳ ನಂತರ ಭಾರತೀಯ ಪ್ರಧಾನಿಯ ಭೇಟಿ

Modi and Cyprus President Nikos Christodoulides

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಸೈಪ್ರಸ್‌ಗೆ (Cyprus) ಆಗಮಿಸಿದರು. ಇದು ಮೂರು ದೇಶಗಳ ಪ್ರವಾಸದ ಮೊದಲ ಹಂತ. ಅವರು ಲರ್ನಾಕಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಾಗ ಸೈಪ್ರಸ್ ಅಧ್ಯಕ್ಷ ನಿಕಸ್ ಕ್ರಿಸ್ಟೋಡೌಲೈಡ್ಸ್ (Modi and Cyprus President Nikos Christodoulides) ಅವರು ಸ್ವಾಗತಿಸಿದರು.

ಇದರ ನಂತರ ಮೋದಿ ಅವರು ಲೆಮೊಸೊಸ್ ನಗರಕ್ಕೆ ತೆರಳಿದ್ದು, ಅಲ್ಲಿ ಭಾರತೀಯ ಸಮುದಾಯದಿಂದ ಭವ್ಯ ಸ್ವಾಗತ ಪಡೆದುದರು. ವ್ಯಾಪಾರ, ಹೂಡಿಕೆ ಮತ್ತು ನಾವೀನ್ಯತೆ ವಿಷಯಗಳಲ್ಲಿ ಸಹಕಾರ ಹೆಚ್ಚಿಸಲು, ಭಾರತೀಯ ಮತ್ತು ಸೈಪ್ರಸ್ ಉದ್ಯಮಿಗಳೊಂದಿಗೆ ನಡೆದ ಸಭೆಯಲ್ಲಿ ಮೋದಿ ಮತ್ತು ಕ್ರಿಸ್ಟೋಡೌಲೈಡ್ಸ್ ಭಾಗವಹಿಸಿದರು.

ಇಂದು ಇಬ್ಬರು ನಾಯಕರು ನಿಕೋಸಿಯಾ ನಗರದಲ್ಲಿ ದ್ವಿಪಕ್ಷೀಯ ಚರ್ಚೆ ನಡೆಸಲಿದ್ದು, ಶಿಕ್ಷಣ, ಡಿಜಿಟಲ್ ಪಾಲುದಾರಿಕೆ ಮತ್ತು ಭದ್ರತೆ ವಿಷಯಗಳ ಮೇಲೆ ಗಮನ ಹರಿಸಲಿದ್ದಾರೆ. ಭಾರತ-ಯುರೋಪ್ ಹಾಗೂ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಸಹಕಾರದ ಕುರಿತಾದ ಜಾಗತಿಕ ವಿಷಯಗಳ ಬಗ್ಗೆ ಮಾತುಕತೆ ನಡೆಯಲಿದೆ.

ಪ್ರಧಾನಿ ಮೋದಿಯ ಈ ಭೇಟಿಯ ಕೊನೆಯ ಭಾಗವಾಗಿ, ಸೈಪ್ರಸ್ ಅಧ್ಯಕ್ಷರ ನಿವಾಸದಲ್ಲಿ ಗೌರವಭೋಜನ ಏರ್ಪಡಿಸಲಾಗಿದೆ. ನಂತರ ಅವರು ಜಿ-7 ಶೃಂಗಸಭೆಗೆ ಭಾಗವಹಿಸಲು ಕನಡಾದ ಕನನಾಸ್ಕಿಸ್ ಕಡೆಗೆ ಪ್ರಯಾಣ ಮಾಡಲಿದ್ದಾರೆ. ಅಲ್ಲಿಯೂ ಕೆಲ ಪ್ರಮುಖ ದ್ವಿಪಕ್ಷೀಯ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.

ಇದು ಕಳೆದ 20 ವರ್ಷಗಳಲ್ಲಿ ಸೈಪ್ರಸ್‌ಗೆ  ಮೊದಲ ಭಾರತೀಯ ಪ್ರಧಾನಿಯ ಭೇಟಿ. ಜೂನ್ 18ರಂದು ಅವರು ಪ್ರವಾಸದ ಕೊನೆಯ ಹಂತವಾಗಿ ಕ್ರೊಯೇಷಿಯಾ ತಲುಪಲಿದ್ದು, ಬಳಿಕ ಭಾರತಕ್ಕೆ ಹಿಂದಿರುಗಲಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version