Mulbagal (Mulabagilu), Kolar : ಮುಳಬಾಗಿಲು ತಾಲ್ಲೂಕಿನ ಮಲ್ಲಸಂದ್ರ ಕೆರೆ ಸಮೀಪವಿರುವ ನಗರಸಭೆ ಕಸ ವಿಲೇವಾರಿ ಘಟಕದ ಬಳಿ ಶನಿವಾರ ಸಂಜೆ ಕೊಳೆತ ಸ್ಥಿತಿಯಲ್ಲಿ ಮೃತದೇಹ (Dead Body) ಪತ್ತೆಯಾಗಿದ್ದು, ಚಿಂದಿ ಆಯುವ ಕಾಯಕ ಮಾಡುವ ದೀಪಾ (19) ಎನ್ನುವವರ ಮೃತದೇಹ ಎಂದು ಗುರುತಿಸಲಾಗಿದೆ.
ವ್ಯಕ್ತಿಯು 15 ದಿನಗಳ ಹಿಂದೆ ಮೃತಪಟ್ಟಿರುಬಹುದು ಎಂದು ಅಂದಾಜಿಸಲಾಗಿದ್ದು, ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.