Home News Neeraj Chopra ಜಾವೆಲಿನ್ ಸ್ಪರ್ಧೆ ಈಗ ಬೆಂಗಳೂರಿನಲ್ಲಿ

Neeraj Chopra ಜಾವೆಲಿನ್ ಸ್ಪರ್ಧೆ ಈಗ ಬೆಂಗಳೂರಿನಲ್ಲಿ

Neeraj Chopra

ಚೊಚ್ಚಲ ಆವೃತ್ತಿಯ ‘ನೀರಜ್ ಚೋಪ್ರಾ ಕ್ಲಾಸಿಕ್’ (Neeraj Chopra) ಎಂಬ ಬಹು ನಿರೀಕ್ಷಿತ ಜಾವೆಲಿನ್ ಥ್ರೋ ಸ್ಪರ್ಧೆಯನ್ನು ಹರಿಯಾಣದ ಪಂಚಕುಲದಿಂದ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ.

ಇದೇ ಮೇ 24 ರಂದು ನಡೆಯಬೇಕಾದ ಈ ಸ್ಪರ್ಧೆ ಪಂಚಕುಲದ ತಾವ್ ದೇವಿ ಲಾಲ್ ಸ್ಟೇಡಿಯಂನಲ್ಲಿ ನಡೆಯಬೇಕಿತ್ತು. ಆದರೆ ಫ್ಲಡ್ ಲೈಟ್‌ ಸಮಸ್ಯೆ ಹಿನ್ನೆಲೆಯಲ್ಲಿ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ.

ಸ್ಪರ್ಧೆಯ ಸಂಯೋಜಕರಾದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಅವರು ದಕ್ಷಿಣ ಆಫ್ರಿಕಾದಿಂದ ವರ್ಚುವಲ್ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಾ, ಇದೇ ದಿನಾಂಕದಲ್ಲಿ ಬೆಂಗಳೂರುನಲ್ಲಿ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದರು.

ಈ ‘NC ಕ್ಲಾಸಿಕ್ – 2025’ ಅನ್ನು ವರ್ಲ್ಡ್ ಅಥ್ಲೆಟಿಕ್ಸ್ ವತಿಯಿಂದ ಎ ವಿಭಾಗ ಅಥವಾ ಕಾಂಟಿನೆಂಟಲ್ ಟೂರ್ ಗೋಲ್ಡ್ ಲೆವೆಲ್ ಈವೆಂಟ್‌ ಆಗಿ ಘೋಷಿಸಲಾಗಿದೆ. ಭಾರತದಲ್ಲಿ ಈ ರೀತಿಯ ಪ್ರಥಮ ಜಾವೆಲಿನ್ ಸ್ಪರ್ಧೆಯಾಗಿದೆ.

ಸ್ಪರ್ಧೆಯಲ್ಲಿ ಜಾಗತಿಕ ತಾರೆಯರಾದ ಗ್ರೆನೆಡಾದ ಆ್ಯಂಡರ್ಸನ್ ಪೀಟರ್ಸ್ (2 ಬಾರಿಯ ವಿಶ್ವ ಚಾಂಪಿಯನ್), ಜರ್ಮನಿಯ ಥಾಮಸ್ ರೋಹ್ಲರ್ (2016 ರ ರಿಯೋ ಒಲಿಂಪಿಕ್ಸ್ ಚಾಂಪಿಯನ್), ಕೀನ್ಯಾದ ಜೂಲಿಯಸ್ ಯೆಗೋ ಮತ್ತು ಯುಎಸ್‌ಎನ ಕರ್ಟಿಸ್ ಥಾಂಪ್ಸನ್ ಭಾಗವಹಿಸಲಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಪಾಕಿಸ್ತಾನದ ಅರ್ಷದ್ ನದೀಂ ಅವರನ್ನೂ ಆಹ್ವಾನಿಸಲಾಗಿದೆ. ಅವರು ಸ್ಪರ್ಧೆಯಲ್ಲಿ ಭಾಗವಹಿಸುವ ಬಗ್ಗೆ ಇನ್ನೂ ದೃಢಪಡಿಸಬೇಕಿದೆ ಎಂದು ಆಯೋಜಕರು ತಿಳಿಸಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version