Home News ಭಾರತೀಯ ಸೇನೆಗೆ ಹೊಸ AI Machine Gun: Bengaluru ತಯಾರಿಸಿದ ಶಕ್ತಿಶಾಲಿ ಆಯುಧ!”

ಭಾರತೀಯ ಸೇನೆಗೆ ಹೊಸ AI Machine Gun: Bengaluru ತಯಾರಿಸಿದ ಶಕ್ತಿಶಾಲಿ ಆಯುಧ!”

AI Machine Gun

ಭಾರತೀಯ ಸೇನೆಗೆ ಇನ್ನೊಂದು ಶಕ್ತಿಶಾಲಿ ಆಯುಧ ಸೇರ್ಪಡೆಯಾಗಿದೆ. ಬೆಂಗಳೂರು ಮೂಲದ BSS ಕಂಪನಿಯ ಸಹಾಯದಿಂದ, ಜೂನ್ 2025ರಲ್ಲಿ ದೇಶದ ಮೊದಲ ಎಐ ಆಧಾರಿತ ಮಷಿನ್ ಗನ್ (AI Machine Gun) ಪರೀಕ್ಷೆ ಯಶಸ್ವಿಯಾಗಿ ಮುಗಿಯಿತು.

ಈ ಗನ್ 7.62×51 mm ಬ್ಯಾರೆಲ್ ಹೊಂದಿರುವ ನೆಗೆವ್ ಲೈಟ್ ಮೆಷಿನ್ ಗನ್ (LMG). ಸಮುದ್ರಮಟ್ಟದಿಂದ 14,500 ಅಡಿ ಎತ್ತರದಲ್ಲಿಯೇ ಈ ಪರೀಕ್ಷೆಗಳನ್ನು ನಡೆಸಲಾಯಿತು. ಈ ಎಐ ಗನ್ ಶತ್ರುಗಳನ್ನು ಗುರುತಿಸಲು, ಸ್ನೇಹಿತರು ಮತ್ತು ಶತ್ರುಗಳನ್ನು ಭೇದಿಸಲು ಹಾಗೂ ಗುರಿಯನ್ನು ನಿಖರವಾಗಿ ಹೊಡೆಯಲು ಸಾಮರ್ಥ್ಯ ಹೊಂದಿದೆ.

600 ಮೀಟರ್ ದೂರದಲ್ಲಿಯೂ ಗುರಿ ಹಿಡಿಯಬಲ್ಲ ಈ ಗನ್ ಗರಿಷ್ಠ 1,000 ಮೀಟರ್ ವ್ಯಾಪ್ತಿಯೊಳಗೆ ಪರಿಣಾಮಕಾರಿಯಾಗಿದೆ. ಉಷ್ಣ ಮತ್ತು ಆಪ್ಟಿಕಲ್ ಸೆನ್ಸಾರ್‌ಗಳ ಮಿಶ್ರಣವಿರುವ ಈ ಗನ್, ಪರ್ವತ ಪ್ರದೇಶಗಳಂತಹ ಕಠಿಣ ಪರಿಸ್ಥಿತಿಗಳಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ಹವಾಮಾನ, ಗಾಳಿಯ ದಿಕ್ಕು, ತಾಪಮಾನ ಮುಂತಾದ ಮಾಹಿತಿಗಳನ್ನು ಆಧರಿಸಿ ಗುರಿಗೆ ಸೂಕ್ತವಾದ ಗುಂಡುಹಾರ ಮಾಡುತ್ತದೆ. 21 ದಿನಗಳವರೆಗೆ ಬಂಕರ್ ನಲ್ಲಿಯೇ ಇಟ್ಟು, ದೂರದಿಂದ ಕಮಾಂಡ್ ಮೂಲಕ ನಡಿಸಲು ಈ ಗನ್‌ನ್ನು ಬಳಸಬಹುದು.

ಬಂಕರ್, ಶಸ್ತ್ರಸಜ್ಜಿತ ವಾಹನಗಳು, ಹಡಗುಗಳು, ಮಾನವರಹಿತ ನೆಲದ ವಾಹನಗಳು ಮತ್ತು ನಿಗದಿತ ವೇದಿಕೆಗಳಲ್ಲಿ ಇದನ್ನು ಬಳಸಬಹುದಾಗಿದೆ.

2020ರಲ್ಲಿ ಭಾರತ ಇಸ್ರೇಲಿನಿಂದ 16,479 ನೆಗೆವ್ ಬಂದೂಕುಗಳನ್ನು ಆರ್ಡರ್ ನೀಡಿತ್ತು. ಈಗ ಇನ್ನೂ 40,000ಕ್ಕೂ ಹೆಚ್ಚು ಅಗತ್ಯವಿದೆ. ಇತ್ತೀಚಿನ ಪಾಕಿಸ್ತಾನ ಗಡಿಯಲ್ಲಿ ನಡೆದ ‘ಆಪರೇಷನ್ ಸಿಂಧೂರ್’ನಲ್ಲಿ ಸ್ಥಳೀಯವಾಗಿ ತಯಾರಿಸಿದ ಗನ್‌ಗಳು ಉತ್ತಮ ಪರಿಣಾಮ ತೋರಿವೆ.

ಈ ಹೊಸ ಎಐ ಗನ್ ಪ್ರಯೋಗ ‘ಮೇಕ್ ಇನ್ ಇಂಡಿಯಾ’ ಹಾಗೂ ‘ಆತ್ಮನಿರ್ಭರ ಭಾರತ’ ಯೋಜನೆಗೆ ಉತ್ತೇಜನ ನೀಡುತ್ತಿದೆ. ಪ್ರತಿ ವರ್ಷ ₹100 ಕೋಟಿ ರುಪಾಯಿ ಎಐ ಸಂಶೋಧನೆಗೆ ವಿನಿಯೋಗಿಸುತ್ತಿರುವ ರಕ್ಷಣಾ ಸಚಿವಾಲಯ, ₹1.75 ಲಕ್ಷ ಕೋಟಿ ಮೌಲ್ಯದ ಉತ್ಪಾದನೆ ಹಾಗೂ ₹35 ಸಾವಿರ ಕೋಟಿ ರಫ್ತು ಗುರಿಯನ್ನು ಹೊಂದಿದೆ.

ರಕ್ಷಣಾ ತಜ್ಞರ ಪ್ರಕಾರ, ಈ ಎಐ ಗನ್ ಬಳಕೆಯಿಂದ ಗಡಿ ಭದ್ರತೆ, ಶಿಬಿರ ರಕ್ಷಣಾ ವ್ಯವಸ್ಥೆ ಹಾಗೂ ಅಪಾಯಕರ ಪ್ರದೇಶಗಳಲ್ಲಿ ಭದ್ರತೆಯ ಮಟ್ಟ ಹೆಚ್ಚಾಗಲಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version