Home Karnataka Mandya ಓಂ ಶಕ್ತಿ ದೇವಾಲಯಕ್ಕೆ ಬೀಗ

ಓಂ ಶಕ್ತಿ ದೇವಾಲಯಕ್ಕೆ ಬೀಗ

Srirangapatna, Mandya : ಶ್ರೀರಂಗಪಟ್ಟಣದ ರೈಲ್ವೆ ನಿಲ್ದಾಣದ ಬಳಿ ಇರುವ ಓಂ ಶಕ್ತಿ ದೇವಾಲಯ (Om Shakti Temple) ದಿಂದ ತಮಿಳುನಾಡಿನ ಮೆಲ್ ಮರವತ್ತೂರು (Melmaruvathur) ಓಂ ಶಕ್ತಿ ದೇವಾಲಯಕ್ಕೆ (Adhiparasakthi Omsakthiamma Temple) ಹೋಗಿ ವಾಪಾಸಾದವರಲ್ಲಿ Covid–19 ಕಾಣಿಸಿಕೊಂಡಿರುವುದರಿಂದ ಶ್ರೀರಂಗಪಟ್ಟಣದ ಓಂ ಶಕ್ತಿ ದೇವಾಲಯವನ್ನು ಬುಧವಾರ ಅರ್ಚಕ ಶಿವ ಬೀಗ ಹಾಕಿದರು.

ಈ ದೇವಾಲಯದಲ್ಲಿ ಮಾಲೆ ಧರಿಸಿ ಭಕ್ತರು ಇರುಮುಡಿ ಕಟ್ಟಿಸಿಕೊಂಡು ತಮಿಳುನಾಡಿನ ಮರವತ್ತೂರಿನ ಓಂಶಕ್ತಿಗೆ ತೆರಳುತ್ತಿದ್ದರು. ಕೊರೊನಾ ಸೋಂಕು ಹರಡುತ್ತಿರುವ ಕಾರಣ ಅಧಿಕಾರಿಗಳ ಸೂಚನೆಯಂತೆ ಇರುಮುಡಿ ಸೇವೆ ಒಳಗೊಂಡಂತೆ ಎಲ್ಲಾ ಸೇವೆ ನಿಲ್ಲಿಸಿ ಕೋವಿಡ್‌ ಹತೋಟಿಗೆ ಬರುವವರೆಗೆ ಯಾತ್ರೆಯನ್ನು ಮುಂದೂಡುವಂತೆ ತಿಳಿಸಲಾಗಿದೆ ಎಂದು ಅರ್ಚಕ ಶಿವ ತಿಳಿಸಿದರು.

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version