Home News Sudanನಲ್ಲಿ ವಿಮಾನ ಪತನ: ಭಾರತೀಯರು ಸೇರಿದಂತೆ 20 ಜನರ ದುರ್ಮರಣ

Sudanನಲ್ಲಿ ವಿಮಾನ ಪತನ: ಭಾರತೀಯರು ಸೇರಿದಂತೆ 20 ಜನರ ದುರ್ಮರಣ

Plane crash in Sudan


Juba: ದಕ್ಷಿಣ ಸುಡಾನ್ ನ (Sudan) ಉತ್ತರ ಭಾಗದಲ್ಲಿ ಸಣ್ಣ ವಿಮಾನವೊಂದು ಪತನಗೊಂಡಿದ್ದು, ಇದರ ಪರಿಣಾಮವಾಗಿ ಒಬ್ಬ ಭಾರತೀಯ ಸೇರಿದಂತೆ ಕನಿಷ್ಠ 20 ಮಂದಿ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಸಂಸ್ಥೆ AFP ವರದಿ ಮಾಡಿದೆ.

ಚೀನಾದ ತೈಲ ಸಂಸ್ಥೆ ಗ್ರೇಟರ್ ಪಯೋನಿಯರ್ ಆಪರೇಟಿಂಗ್ ಕಂಪನಿ ಚಾರ್ಟರ್ ಮಾಡಿದ್ದ ಈ ವಿಮಾನದಲ್ಲಿ ಇಬ್ಬರು ಪೈಲಟ್‌ಗಳು ಸೇರಿದಂತೆ 21 ಜನರು ಇದ್ದರು ಎಂದು ಯೂನಿಟಿ ರಾಜ್ಯದ ಮಾಹಿತಿ ಸಚಿವ ಗಟ್ವೆಚ್ ಬಿಪಾಲ್ ತಿಳಿಸಿದ್ದಾರೆ.

ವಿಮಾನವು ದಕ್ಷಿಣ ಸುಡಾನ್ ರಾಜಧಾನಿ ಜುಬಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಲು ತೈಲ ಕ್ಷೇತ್ರದ ಬಳಿ ಟೇಕ್‌ಆಫ್ ಆಗುತ್ತಿದ್ದಾಗ ಪತನಗೊಂಡಿದೆ. ವಿಮಾನ ನಿಲ್ದಾಣದಿಂದ ಕೇವಲ 500 ಮೀಟರ್ ದೂರದಲ್ಲಿ ದುರಂತ ಸಂಭವಿಸಿದೆ.

ವಿಮಾನದಲ್ಲಿದ್ದ 21 ಮಂದಿಯಲ್ಲಿ ಒಬ್ಬರೇ ಬದುಕುಳಿದಿದ್ದು, ಅವರು ದಕ್ಷಿಣ ಸುಡಾನ್ ಮೂಲದ ಇಂಜಿನಿಯರ್ ಎಂದು ವರದಿಯಾಗಿದೆ. ತಕ್ಷಣವೇ ಅವರನ್ನು ಬೆಂಟಿಯು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪತನಗೊಂಡ ವಿಮಾನದಲ್ಲಿ 16 ಜನ ದಕ್ಷಿಣ ಸುಡಾನ್ ನಾಗರಿಕರು, ಇಬ್ಬರು ಚೀನೀ ಪ್ರಜೆಗಳು ಮತ್ತು ಒಬ್ಬ ಭಾರತೀಯ ಪ್ರಜೆ ಇದ್ದರು ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತದ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆದರೂ ತಾಂತ್ರಿಕ ಸಮಸ್ಯೆಯಿಂದ ಈ ದುರ್ಘಟನೆ ಸಂಭವಿಸಿದ್ದಾಗಿ ಶಂಕಿಸಲಾಗಿದೆ.

2011ರಲ್ಲಿ ಸ್ವಾತಂತ್ರ್ಯ ಪಡೆದ ದಕ್ಷಿಣ ಸುಡಾನ್, ತೈಲ ಉತ್ಪಾದನೆಯಲ್ಲಿ ಪ್ರಮುಖ ದೇಶವಾಗಿದೆ. ಆದರೆ, ಅಲ್ಲಿ ವಿಮಾನ ಅಪಘಾತಗಳು ನಿರಂತರವಾಗಿವೆ.

  • 2017ರಲ್ಲಿ ವೌದಿನಲ್ಲಿ ನಡೆದ ಅಪಘಾತದಲ್ಲಿ 37 ಜನರು ಪವಾಡಸದೃಶವಾಗಿ ಪಾರಾದರು.
  • 2015ರಲ್ಲಿ ಜುಬಾದಲ್ಲಿ ಆಂಟೊನೊವ್ ವಿಮಾನ ಪತನಗೊಂಡು 36 ಮಂದಿ ಸಾವನ್ನಪ್ಪಿದರು.
  • 2021ರಲ್ಲಿ ವಿಶ್ವ ಆಹಾರ ಕಾರ್ಯಕ್ರಮಕ್ಕಾಗಿ ಇಂಧನ ಸಾಗಿಸುತ್ತಿದ್ದ ಸರಕು ವಿಮಾನ ಪತನಗೊಂಡು 5 ಮಂದಿ ಪ್ರಾಣ ಕಳೆದುಕೊಂಡರು.

ಈ ಹಿನ್ನಲೆಯಲ್ಲಿ, ದಕ್ಷಿಣ ಸುಡಾನ್‌ನ ವಿಮಾನಯಾನ ಸುರಕ್ಷತೆ ಬಗ್ಗೆ ಗಂಭೀರ ಚಿಂತನೆ ಅಗತ್ಯವಾಗಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version