Home News ಬಿಡುಗಡೆಗೆ ಮೊದಲೇ 1000 ಕೋಟಿ ಗಳಿಸಿದ Pushpa 2

ಬಿಡುಗಡೆಗೆ ಮೊದಲೇ 1000 ಕೋಟಿ ಗಳಿಸಿದ Pushpa 2

December 6 ರಂದು Pushpa 2 ಬಿಡುಗಡೆ

Allu Arjun in Pushpa 2 Movie

ಇತ್ತೀಚೆಗೆ ಬಿಡುಗಡೆ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡು Jr NTR ನಟನೆಯ ‘ದೇವರ’ ಸಿನಿಮಾ ಒಂದು ತಿಂಗಳ ಒಳಗಾಗಿಯೇ ಸುಮಾರು 600 ಕೋಟಿ ಗಳಿಸಿತ್ತು. ಆದರೆ ಅಲ್ಲು ಅರ್ಜುನ್ ನಟನೆಯ ‘Pushpa 2’ ಸಿನಿಮಾ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿದ್ದು ಈ ಸಿನಿಮಾ ಬಿಡುಗಡೆ ಆಗುವ ಮುಂಚೆಯೇ 1000 ಕೋಟಿ ಗಳಿಕೆ ದಾಟಿಬಿಟ್ಟಿದೆ.

ಸಿನಿಮಾದ ಡಿಜಿಟಲ್, ಸ್ಯಾಟಲೈಟ್, ಮ್ಯೂಸಿಕ್ ಹಕ್ಕುಗಳು ಭಾರಿ ದೊಡ್ಡ ಮೊತ್ತಕ್ಕೆ ಮಾರಾಟವಾಗಿವೆ. ಅಲ್ಲದೆ ಸಿನಿಮಾದ ಬಿಡುಗಡೆ ಹಕ್ಕುಗಳನ್ನು ಸಹ ಈಗಾಗಲೇ ಮಾರಾಟ ಮಾಡಲಾಗಿದ್ದು, ಸಿನಿಮಾ ಬಿಡುಗಡೆಗೆ ಇನ್ನೂ ಒಂದು ತಿಂಗಳಿಗೂ ಹೆಚ್ಚು ಸಮಯ ಇರುವಾಗಲೇ ಸಿನಿಮಾ ಭಾರಿ ಮೊತ್ತ ಗಳಿಕೆ ಮಾಡಿದೆ.

ಆ ಮೂಲಕ ಹೊಸ ದಾಖಲೆಯನ್ನು ಬರೆದಿದೆ. ಭಾರತದ ಇನ್ಯಾವುದೇ ಸಿನಿಮಾ ಬಿಡುಗಡೆ ಮುಂಚೆಯೇ ಇಷ್ಟು ದೊಡ್ಡ ಮೊತ್ತ ಗಳಿಕೆ ಮಾಡಿಲ್ಲ.

ಸಿನಿಮಾದ ಬಿಡುಗಡೆ ಹಕ್ಕನ್ನು ಸಹ ಮೈತ್ರಿ ನಿರ್ಮಾಣ ಸಂಸ್ಥೆ ಕೆಲ ದೊಡ್ಡ ವಿತರಕರಿಗೆ ಮಾರಾಟ ಮಾಡಿದೆ. ಆಂಧ್ರ-ತೆಲಂಗಾಣದ ಬಿಡುಗಡೆ ಹಕ್ಕು 220 ಕೋಟಿಗೆ ಮಾರಾಟ ಮಾಡಲಾಗಿದೆ.

ಹಿಂದಿ ಬಿಡುಗಡೆ ಹಕ್ಕು ಬರೋಬ್ಬರಿ 200 ಕೋಟಿ ರೂಪಾಯಿಗೆ ಮಾರಾಟವಾಗಿದೆ. ತಮಿಳುನಾಡಿನ ಬಿಡುಗಡೆ ಹಕ್ಕು 50 ಕೋಟಿ ರೂಪಾಯಿಗೆ, ಕರ್ನಾಟಕ ಬಿಡುಗಡೆ ಹಕ್ಕು 30 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ.

ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆಗೆ ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್, ಫಹಾದ್ ಫಾಸಿಲ್, ಸುನಿಲ್ ಇನ್ನೂ ಕೆಲವರು ನಟಿಸಿದ್ದಾರೆ.

ಸಿನಿಮಾ ಡಿಸೆಂಬರ್ 5 ರಂದು ವಿಶ್ವದಾದ್ಯಂತ ಏಕಕಾಲಕ್ಕೆ ಬಿಡುಗಡೆ ಆಗಲಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version