Home News ದೇಶೀಯ ಮಾರುಕಟ್ಟೆಗೆ Realme 15T ಬಿಡುಗಡೆ

ದೇಶೀಯ ಮಾರುಕಟ್ಟೆಗೆ Realme 15T ಬಿಡುಗಡೆ

Realme 15T

ಸ್ಮಾರ್ಟ್‌ಫೋನ್ (Smartphone) ಯಾರಕ ರಿಯಲ್‌ಮಿ (Realme) ಕಂಪನಿಯು ಭಾರತದಲ್ಲಿ ತನ್ನ ಹೊಸ Realme 15T ಮಾದರಿಯನ್ನು ಪರಿಚಯಿಸಿದೆ. ಇದು 15 ಸರಣಿಯ ಭಾಗವಾಗಿದ್ದು, ಆಪಲ್‌ನ ಡೈನಾಮಿಕ್ ಐಲ್ಯಾಂಡ್‌ನಂತೆ ಕಾರ್ಯನಿರ್ವಹಿಸುವ ಮಿನಿ ಕ್ಯಾಪ್ಸುಲ್ ಫೀಚರ್ ಹೊಂದಿದೆ.

ಮುಖ್ಯ ವೈಶಿಷ್ಟ್ಯಗಳು

  • ಡಿಸ್ಪ್ಲೇ: 6.57 ಇಂಚಿನ AMOLED ಸ್ಕ್ರೀನ್, 120Hz ರಿಫ್ರೆಶ್ ರೇಟ್, 4000 ನಿಟ್ಸ್ ಬ್ರೈಟ್ನೆಸ್.
  • ಪ್ರೊಸೆಸರ್: MediaTek Dimensity 6400 Max.
  • ಮೆಮರಿ: ಗರಿಷ್ಠ 12GB RAM + 256GB ಸ್ಟೋರೇಜ್.
  • ಆಪರೇಟಿಂಗ್ ಸಿಸ್ಟಮ್: Android 15 ಆಧಾರಿತ Realme UI 6.0.
  • ಕ್ಯಾಮೆರಾ
  • ಹಿಂಭಾಗದಲ್ಲಿ 50MP ರಿಯರ್ ಕ್ಯಾಮೆರಾ (4K ವಿಡಿಯೋ ರೆಕಾರ್ಡಿಂಗ್).
  • ಮುಂಭಾಗದಲ್ಲಿ 50MP ಸೆಲ್ಫಿ ಕ್ಯಾಮೆರಾ.
  • ಬ್ಯಾಟರಿ: 7000mAh ಸಾಮರ್ಥ್ಯ, 25+ ಗಂಟೆಗಳ ವಿಡಿಯೋ, 128 ಗಂಟೆಗಳ ಆಡಿಯೋ, 13 ಗಂಟೆಗಳ ಗೇಮಿಂಗ್ ಬ್ಯಾಕಪ್.
  • ಹೆಚ್ಚುವರಿ ವೈಶಿಷ್ಟ್ಯ: ನೀರಿನ ರಕ್ಷಣೆಗೆ IP69 ರೇಟಿಂಗ್.
  • ಬಣ್ಣಗಳ ಆಯ್ಕೆ
  • Realme 15T ಮೂರು ಅದ್ಭುತ ಬಣ್ಣಗಳಲ್ಲಿ ಲಭ್ಯ.
  • ಫ್ಲೋಯಿಂಗ್ ಸಿಲ್ವರ್
  • ಸಿಲ್ಕ್ ಬ್ಲೂ
  • ಸೂಟ್ ಟೈಟಾನಿಯಂ
  • ಬೆಲೆ ಮತ್ತು ವೇರಿಯಂಟ್ಗಳು
  • 8GB + 128GB: ₹20,999
  • 8GB + 256GB: ₹22,999
  • 12GB + 256GB: ₹24,999
  • ಆಫರ್‌ನಡಿ ಕೆಲವು ಮಾದರಿಗಳು ₹18,999 ರಿಂದ ಪ್ರಾರಂಭ.

ಪ್ರೀ-ಬುಕಿಂಗ್: ಸೆಪ್ಟೆಂಬರ್ 2ರಿಂದ ಪ್ರೀ-ಬುಕಿಂಗ್ ಪ್ರಾರಂಭವಾಗಿದೆ. Flipkart ಮತ್ತು Realme ಅಧಿಕೃತ ವೆಬ್‌ಸೈಟ್ನಲ್ಲಿ ಸ್ಮಾರ್ಟ್‌ಫೋನ್ ಲಭ್ಯ. ಪ್ರೀ-ಬುಕಿಂಗ್ ಮಾಡಿದವರಿಗೆ Realme Buds T01 ಉಚಿತ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version