Home Business Renewable Energy: ಭಾರತದಲ್ಲಿ 232 ಗಿಗಾವ್ಯಾಟ್ ಸಾಮರ್ಥ್ಯ, ಜಾಗತಿಕವಾಗಿ 3ನೇ ಸ್ಥಾನ

Renewable Energy: ಭಾರತದಲ್ಲಿ 232 ಗಿಗಾವ್ಯಾಟ್ ಸಾಮರ್ಥ್ಯ, ಜಾಗತಿಕವಾಗಿ 3ನೇ ಸ್ಥಾನ

Renewable Energy

ಭಾರತದಲ್ಲಿ ಸ್ಥಾಪಿತವಾದ ರಿನಿವಬಲ್ ಎನರ್ಜಿ (Renewable Energy) ಉತ್ಪಾದನೆ 232 ಗಿಗಾವ್ಯಾಟ್‌ಕ್ಕೆ ತಲುಪಿದ್ದು, ಇದು ಕಳೆದ 10 ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ. 2014ರಲ್ಲಿ ಇದು 75.52 ಗಿಗಾವ್ಯಾಟ್ ಮಾತ್ರವಾಗಿತ್ತು. ಈ ಅವಧಿಯಲ್ಲಿ ಸೌರಶಕ್ತಿ, ವಾಯುಶಕ್ತಿ ಮತ್ತು ಜಲವಿದ್ಯುತ್ ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಸೌರಶಕ್ತಿ ದರಗಳು ಕೂಡ ಸುಮಾರು 80% ಇಳಿಕೆಯಾಗಿದ್ದು, ಇದೀಗ ಒಂದು ಯುನಿಟ್ ವಿದ್ಯುತ್‌ಗಾಗಿ 10.95 ರೂ ಮಾತ್ರ ಖರ್ಚಾಗುತ್ತದೆ.

2014ರಲ್ಲಿ ಸೌರಶಕ್ತಿ ಸಾಮರ್ಥ್ಯ 2.82 ಗಿಗಾವ್ಯಾಟ್ ಇದ್ದದ್ದು ಇಂದು 108 ಗಿಗಾವ್ಯಾಟ್‌ಕ್ಕೆ ಏರಿದೆ. ವಾಯುಶಕ್ತಿ ಸಾಮರ್ಥ್ಯವೂ 21 ಗಿಗಾವ್ಯಾಟ್‌ನಿಂದ 51 ಗಿಗಾವ್ಯಾಟ್‌ವರೆಗೆ ಹೆಚ್ಚಾಗಿದೆ. ಜೊತೆಗೆ ಸೋಲಾರ್ ಸೆಲ್ ತಯಾರಿಕೆಯಲ್ಲಿ ಭಾರತವು ಹೆಚ್ಚಾಗಿ ಮುಂದಾಗಿದೆ; ಈಗ 25 ಗಿಗಾವ್ಯಾಟ್ ಸೋಲಾರ್ ಸೆಲ್ ತಯಾರಿಕೆ ನಡೆಯುತ್ತಿದೆ.

ಜಾಗತಿಕವಾಗಿ Renewable Energy ಸಾಮರ್ಥ್ಯದಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ.

  • ಚೀನಾ – 1827 ಗಿಗಾವ್ಯಾಟ್
  • ಅಮೆರಿಕ – 428 ಗಿಗಾವ್ಯಾಟ್
  • ಭಾರತ – 232 ಗಿಗಾವ್ಯಾಟ್

ಭಾರತವು 2030 ರೊಳಗೆ 500 ಗಿಗಾವ್ಯಾಟ್ ಸಾಮರ್ಥ್ಯವನ್ನು ತಲುಪಲು ಯೋಜನೆ ಹಾಕಿದ್ದು, ಮುಂದಿನ ಐದು ವರ್ಷಗಳಲ್ಲಿ ವರ್ಷಕ್ಕೆ ಕನಿಷ್ಠ 50 ಗಿಗಾವ್ಯಾಟ್ ಹೆಚ್ಚಿಸುವ ಗುರಿಯಿದೆ. ಈ ಗುರಿ ಸಫಲವಾದರೆ, ಭಾರತ ಅಮೆರಿಕನನ್ನು ಹಿಂದಿಕ್ಕಬಹುದು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version