Home News Samsung Galaxy S25 Edge: ಹೊಸ ಸ್ಲಿಮ್ Smartphone ಬಿಡುಗಡೆ

Samsung Galaxy S25 Edge: ಹೊಸ ಸ್ಲಿಮ್ Smartphone ಬಿಡುಗಡೆ

Samsung Galaxy S25 Edge

Samsung ತನ್ನ ಅತ್ಯಂತ ಸ್ಲಿಮ್ Galaxy S25 Edge ಮೊಬೈಲ್ ಫೋನನ್ನು 13 ಮೇ (ಮಂಗಳವಾರ) ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಮೊಬೈಲ್ ಫೋನಿನ ದಪ್ಪವು ಕೇವಲ 5.85mm ಮತ್ತು ಇದು ಗೋರಿಲ್ಲಾ ಗ್ಲಾಸ್ ಸೆರಾಮಿಕ್ 2 ಪ್ರೊಟೆಕ್ಷನ್‌ನೊಂದಿಗೆ ರಕ್ಷಿಸಲ್ಪಟ್ಟಿದೆ.

ಬಿಡುಗಡೆಯ ಸ್ಥಳ ಮತ್ತು ಸಮಯ: ಈ ಹೊಸ ಸಾಧನವನ್ನು ಪರಿಚಯಿಸಲು, Samsung ವರ್ಚುವಲ್ ಅನಪ್ಯಾಕ್ಡ್ ಈವೆಂಟ್ ಅನ್ನು ಆಯೋಜಿಸಿದೆ. 13 ಮೇ 2025ರಂದು ಬೆಳಿಗ್ಗೆ 5:30ಕ್ಕೆ ಅಧಿಕೃತ ಲೈವ್ ಸ್ಟ್ರೀಮ್ ಅನ್ನು Samsung.com ಮತ್ತು Samsung ಅವರ YouTube ಚಾನೆಲ್‌ನಲ್ಲಿ ನೋಡಬಹುದಾಗಿದೆ.

ಮಾರುಕಟ್ಟೆಯಲ್ಲಿ ಲಭ್ಯತೆ: ಆರಂಭದಲ್ಲಿ, Galaxy S25 Edge ದಕ್ಷಿಣ ಕೊರಿಯಾ ಮತ್ತು ಚೀನಾದಲ್ಲಿ ಲಭ್ಯವಿರಬಹುದು. ನಂತರ ಇದು ಇತರ ದೇಶಗಳಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ. ಈ ಫೋನ್ ಅನ್ನು 99,999 ರೂ.ಗಳಿಗೆ ಬಿಡುಗಡೆ ಮಾಡುವ ನಿರೀಕ್ಷೆ ಇದೆ.

ವಿನ್ಯಾಸ, ಕ್ಯಾಮೆರಾ ಮತ್ತು ಕಾರ್ಯಕ್ಷಮತೆ: Galaxy S25 Edge 163 ಗ್ರಾಂ ತೂಕ ಹೊಂದಿದ್ದು, ಅದು ಬಹುಶಃ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ಸ್ಲಿಮ್ ಮತ್ತು ಲೈಟ್ ವೇಟ್ ಪ್ರೀಮಿಯಂ Smartphone  ಗಳಲ್ಲಿ ಒಂದಾಗಲಿದೆ. ಇದರ ಡಿಸ್ಪ್ಲೇ 6.7 ಇಂಚು AMOLED ಸ್ಕ್ರೀನ್ ಮತ್ತು 120Hz ರಿಫ್ರೆಶ್ ರೇಟ್ ಹೊಂದಿದೆ. ಇದರ ಹಿಂದುಗೆ 200MP ಮೆನ್ ಕ್ಯಾಮೆರಾ ಮತ್ತು 12MP ಅಲ್ಟ್ರಾ-ವೈಡ್ ಲೆನ್ಸ್‌ಗಳನ್ನು ಹೊಂದಿದೆ.

ಪರ್ಫಾರ್ಮೆನ್ಸ್: Galaxy S25 Edge ನಲ್ಲಿ Qualcomm Snapdragon 8 Elite ಪ್ರೊಸೆಸರ್ ಅಳವಡಿಸಲಾಗಿದ್ದು, ಇದು 3,900mAh ಬ್ಯಾಟರಿಯನ್ನು ಹೊಂದಿದೆ.

ಬಣ್ಣದ ಆಯ್ಕೆಗಳು: ಈ ಮೊಬೈಲ್ ಟೈಟಾನಿಯಂ ಬ್ಲೂ, ಟೈಟಾನಿಯಂ ಸಿಲ್ವರ್, ಮತ್ತು ಟೈಟಾನಿಯಂ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿರುತ್ತದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version