Home Business Pacific Ocean ನಲ್ಲಿ ಬೆಂಕಿಯಿಂದ ಹಡಗು ಮುಳುಗಿ ಲಕ್ಷಾಂತರ ಮೌಲ್ಯದ ಕಾರುಗಳು ನಷ್ಟ

Pacific Ocean ನಲ್ಲಿ ಬೆಂಕಿಯಿಂದ ಹಡಗು ಮುಳುಗಿ ಲಕ್ಷಾಂತರ ಮೌಲ್ಯದ ಕಾರುಗಳು ನಷ್ಟ

Ship carrying 3,000 cars sinks in Pacific Ocean

ANCHORAGE (Alaska): ಮತ್ತೊಂದು ಸರಕು ಸಾಗಣೆ ಹಡಗು ಪೆಸಿಫಿಕ್ ಸಮುದ್ರದಲ್ಲಿ (Pacific Ocean) ಮುಳುಗಿರುವ ಘಟನೆ ನಡೆದಿದೆ. ಮಾರ್ನಿಂಗ್ ಮಿಡಾಸ್ ಎಂಬ ಹಡಗು ಸುಮಾರು 3 ಸಾವಿರ ಕಾರುಗಳು (ಎಲೆಕ್ಟ್ರಿಕ್ ಮತ್ತು ಸಾಮಾನ್ಯ) ಹೊತ್ತೊಯ್ಯುತ್ತಿತ್ತು. ಜೂನ್ 3ರಂದು ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡ ಬಳಿಕ ಉರಿಯುತ್ತಲೇ ಸಾಗಿದ ಹಡಗು, ಕೊನೆಗೆ ಉತ್ತರ ಪೆಸಿಫಿಕ್ ಸಮುದ್ರದಲ್ಲಿ ಮುಳುಗಿತು.

ಹಡಗು ಲಂಡನ್ ನ ಜೋಡಿಯಾಕ್ ಮ್ಯಾರಿಟೈಮ್ ಕಂಪನಿಗೆ ಸೇರಿದದಾಗಿತ್ತು. ಈ ಹಡಗು ಅಲಾಸ್ಕಾದ ಅಡಕ್ ದ್ವೀಪದಿಂದ ಮೆಕ್ಸಿಕೋದ ಪೆಸಿಫಿಕ್ ಬಂದರಿಗೆ ಕಾರುಗಳನ್ನು ಸಾಗಿಸುತ್ತಿತ್ತು. ಸಮುದ್ರದಿಂದ ಸುಮಾರು 300 ಮೈಲು (490 ಕಿ.ಮೀ) ದೂರದಲ್ಲಿದ್ದಾಗ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿತು. ಹವಾಮಾನವಿಷಮತೆ ಮತ್ತು ನೀರು ಸೋರಿಕೆಯಿಂದ ಬೆಂಕಿ ನಂದಿಸಲು ಸಾಧ್ಯವಾಗಲಿಲ್ಲ.

ಹಡಗಿನಲ್ಲಿ ಇದ್ದ 22 ಸಿಬ್ಬಂದಿ ಲೈಫ್ಬೋಟ್ ಮೂಲಕ ಸುರಕ್ಷಿತವಾಗಿ ಹೊರಬಂದಿದ್ದಾರೆ. ಇನ್ನೊಂದು ವ್ಯಾಪಾರಿ ಹಡಗು ಅವರನ್ನು ರಕ್ಷಿಸಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಕಾರುಗಳಲ್ಲಿ 70 ಎಲೆಕ್ಟ್ರಿಕ್ ಮತ್ತು 680 ಸಾಮಾನ್ಯ ವಾಹನಗಳು ಇದ್ದವು. ವಿದ್ಯುತ್ ವಾಹನಗಳ ಡೆಕ್ಕಿನಲ್ಲಿ ಮೊದಲಾಗಿ ಬೆಂಕಿ ಹೊತ್ತಿಕೊಂಡು, ನಂತರ ದಟ್ಟ ಹೊಗೆ ಆವರಿಸಿದೆ ಎಂದು ಕೋಸ್ಟ್ ಗಾರ್ಡ್ ತಿಳಿಸಿದೆ.

2023 ರಲ್ಲಿಯೂ ಇಂಥದ್ದೇ ಘಟನೆಯಲ್ಲಿ 3,000 ವಾಹನಗಳನ್ನು ಹೊತ್ತಿದ್ದ ಹಡಗು ಬೆಂಕಿಗೆ ಆಹುತಿಯಾಗಿ ಪೆಸಿಫಿಕ್ ಸಮುದ್ರದಲ್ಲಿ ಮುಳುಗಿತ್ತು. ಆ ಸಂದರ್ಭದಲ್ಲಿ ಒಬ್ಬರು ಸಾವಿಗೀಡಾಗಿ, ಹಲವರು ಗಾಯಗೊಂಡಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version