Home News Shreyas Iyerನ ವಿಶೇಷ ಸಾಧನೆ

Shreyas Iyerನ ವಿಶೇಷ ಸಾಧನೆ

Shreyas Iyer

ಏಕದಿನ ಕ್ರಿಕೆಟ್ ನಲ್ಲಿ ಟೀಮ್ ಇಂಡಿಯಾ ಆಟಗಾರ ಶ್ರೇಯಸ್ ಅಯ್ಯರ್ (Shreyas Iyer) ಅತ್ಯಂತ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅವರು 36 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 9 ಫೋರ್ ಗಳೊಂದಿಗೆ 59 ರನ್ ಬಾರಿಸಿದ್ದಾರೆ. ಇದರಿಂದ ಅವರ 19ನೇ ಅರ್ಧಶತಕ ಸಾಧನೆ ನಡೆದಿದೆ.

ಈವರೆಗೆ 58 ಏಕದಿನ ಇನಿಂಗ್ಸ್ ಆಡಿದ ಶ್ರೇಯಸ್ ಅಯ್ಯರ್ 5 ಶತಕ ಮತ್ತು 19 ಅರ್ಧಶತಕಗಳನ್ನು ಕಲೆಹಾಕಿದ್ದಾರೆ. ಮೊದಲ 58 ಪಂದ್ಯಗಳಲ್ಲಿ ಇಡೀ ಭಾರತ ತಂಡದಲ್ಲಿ ಅತಿ ಹೆಚ್ಚು 50+ ಸ್ಕೋರ್ ಗಳಿಸಿದ ಬ್ಯಾಟರ್ ಆಗಿ ಅವರು ಸ್ಥಾನ ಪಡೆದಿದ್ದಾರೆ.

ಆದರೆ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಹಾಗೂ ನವಜೋತ್ ಸಿಂಗ್ ಸಿಧು ಮೊದಲ 58 ಇನಿಂಗ್ಸ್‌ನಲ್ಲಿ 21 ಬಾರಿ 50+ ಸ್ಕೋರ್ ಗಳಿಸಿದ್ದಾರೆ. ಆದರೆ ಶ್ರೇಯಸ್ ಅಯ್ಯರ್ ಈಗ 58 ಇನಿಂಗ್ಸ್‌ನಲ್ಲಿ 24 ಬಾರಿ 50+ ಸ್ಕೋರ್ ಗಳಿಸುವ ಮೂಲಕ ಇವರನ್ನು ಹಿಂದಿಕ್ಕಿದ್ದಾರೆ.

58 ಏಕದಿನ ಇನಿಂಗ್ಸ್‌ಗಳಲ್ಲಿ 2428 ಎಸೆತಗಳನ್ನು ಎದುರಿಸಿ 2480 ರನ್ ಗಳಿಸಿರುವ ಶ್ರೇಯಸ್ ಅಯ್ಯರ್, ಭಾರತದ ಮಧ್ಯಮ ಕ್ರಮಾಂಕದ ಮುಖ್ಯ ಆಟಗಾರರಾಗಿದ್ದಾರೆ. ಅಯ್ಯರ್ ಮುಂದಿನ ಚಾಂಪಿಯನ್ಸ್ ಟ್ರೋಫಿಯಲ್ಲಿ 3,000 ರನ್ ಗಳಿಸುವ ವಿಶ್ವಾಸ ಹೊಂದಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version