Home Health ಅಧಿಕ Cholesterol ಗುರುತುಗಳು ಮತ್ತು ನಿಯಂತ್ರಣಕ್ಕೆ ಸಲಹೆಗಳು

ಅಧಿಕ Cholesterol ಗುರುತುಗಳು ಮತ್ತು ನಿಯಂತ್ರಣಕ್ಕೆ ಸಲಹೆಗಳು

Cholesterol

ಇಂದಿನ ವೇಗವಾದ ಜೀವನಶೈಲಿಯಲ್ಲಿ ಕೆಟ್ಟ ಕೊಲೆಸ್ಟ್ರಾಲ್ (Cholesterol) (LDL) ಹೆಚ್ಚಾಗುವುದು ಸಾಮಾನ್ಯವಾಗಿದೆ. ಇದು ಹೃದಯ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಬಹುದು. ತಪ್ಪಿದರೆ, ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.

ಕೊಲೆಸ್ಟ್ರಾಲ್ ಹೆಚ್ಚಿದಾಗ ಕಾಣಿಸಿಕೊಳ್ಳುವ ಪ್ರಮುಖ ಚಿಹ್ನೆಗಳು

  • ಎದೆ ನೋವು – ಹೃದಯ ಸಂಬಂಧಿತ ತೊಂದರೆ ಸೂಚನೆ.
  • ಕಾಲು ನೋವು & ಸೆಳೆತ – ನಡಿಗೆ ವೇಳೆ ಅಥವಾ ನಿಂತಾಗ ನೋವು.
  • ಚರ್ಮದ ಬದಲಾವಣೆ – ಹಳದಿ ನಿಕ್ಷೇಪಗಳು ಕಣ್ಣುಗಳ ಬಳಿಯಲ್ಲಿ.
  • ತಲೆತಿರುಗುವಿಕೆ – ನಿರಂತರ ಮೈಗ್ರೇನ್ ಮತ್ತು ತಲೆತಿರುಗುವಿಕೆ.
  • ಉಸಿರಾಟ ತೊಂದರೆ – ಎದೆ ನೋವಿನ ಜೊತೆಗೆ ಉಸಿರಾಟ ಕಷ್ಟ.
  • ಆಯಾಸ – ದೈನಂದಿನ ಚಟುವಟಿಕೆಗಳಲ್ಲಿ ತ್ವರಿತವಾಗಿ ದಣಿವು.
  • ಉಬ್ಬುವುದು – ಊಟ ನಂತರ ಅಜೀರ್ಣ ಮತ್ತು ಉಬ್ಬರ.
  • ಹೃದಯಾಘಾತ ಲಕ್ಷಣಗಳು – ಸಮತೋಲನ ನಷ್ಟ, ವಾಕರಿಕೆ, ಎದೆ ನೋವು.
  • ದವಡೆ ನೋವು – ಸಾಮಾನ್ಯವಾಗಿ ಎಡಗಡೆ ಕಾಣಿಸಿಕೊಳ್ಳುವ ನೋವು.
  • ಕತ್ತಿನ ಹಿಂಭಾಗದ ನೋವು – ನಿರಂತರವಾಗಿ ತೊಂದರೆ ನೀಡುವ ನೋವು.

ಕೊಲೆಸ್ಟ್ರಾಲ್ ಹೆಚ್ಚಾಗಲು ಕಾರಣಗಳೇನು?

  • ಕುಟುಂಬದಲ್ಲಿ ಹೃದಯ ಕಾಯಿಲೆಯ ಇತಿಹಾಸ
  • ಅಧಿಕ ತೂಕ ಅಥವಾ ಬೊಜ್ಜು
  • ಕೊಬ್ಬುಯುಕ್ತ ಆಹಾರ ಸೇವನೆ
  • ಮದ್ಯಪಾನ ಮತ್ತು ಧೂಮಪಾನ
  • ವ್ಯಾಯಾಮದ ಕೊರತೆ

ಕೊಲೆಸ್ಟ್ರಾಲ್ ನಿಯಂತ್ರಿಸಲು ಸಹಾಯಕ ಆಹಾರಗಳು

  • ವಾಲ್ನಟ್ – ಹೃದಯ ಆರೋಗ್ಯಕ್ಕೆ ಉತ್ತಮ.
  • ಬಾದಾಮಿ – ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯಕ.
  • ಆಲಿವ್ ಎಣ್ಣೆ – ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸಲು ಸಹಾಯಕ.
  • ಅಗಸೆ ಬೀಜ – ಒಮೆಗಾ-3 ಸಮೃದ್ಧ, ಕೊಲೆಸ್ಟ್ರಾಲ್ ತಗ್ಗಿಸುತ್ತದೆ.
  • ಬೆಳಗ್ಗೆ ವಾಕಿಂಗ್ & ಯೋಗ – ಹೃದಯ ಆರೋಗ್ಯಕ್ಕೆ ಉತ್ತಮ.
  • ಕಿತ್ತಳೆ ಹಣ್ಣಿನ ರಸ – ವಿಟಮಿನ್ C ಸಹಾಯದಿಂದ LDL ಕಡಿಮೆ ಮಾಡುತ್ತದೆ.

ಮುಖ್ಯ ಸೂಚನೆ: ಈ ಮಾಹಿತಿ ವೈಜ್ಞಾನಿಕ ಸಂಶೋಧನೆ ಆಧರಿತವಾಗಿದೆ. ದಯವಿಟ್ಟು ವೈದ್ಯರ ಸಲಹೆ ಪಡೆದ ನಂತರವೇ ಯಾವುದೇ ಆರೋಗ್ಯಪದ್ಧತಿಗಳನ್ನು ಅನುಸರಿಸಿ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version