Home Karnataka Chikkaballapura SJCIT ಕಾಲೇಜ್ ನಲ್ಲಿ “Sambhrama 2K22”

SJCIT ಕಾಲೇಜ್ ನಲ್ಲಿ “Sambhrama 2K22”

Chikkaballapur Chikballapur Chickballapur SJCIT Engineering College Sambhrama 2K22 Event

Chikkaballapur : ಚಿಕ್ಕಬಳ್ಳಾಪುರ ನಗರದ ಹೊರವಲಯದ SJCIT ಕಾಲೇಜ್ ನಲ್ಲಿ ಶುಕ್ರವಾರ “ಸಾಂಸ್ಕೃತಿಕ ಉತ್ಸವ–ಸಂಭ್ರಮ 2K22” (Sambrama 2k22) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲ್ಲಾಗಿತ್ತು. ವಿದ್ಯಾರ್ಥಿಗಳು ಡೊಳ್ಳು ಕುಣಿತ, ನಾನಾ ಬಗೆಯ ನೃತ್ಯ ಪ್ರದರ್ಶನ ನೀಡಿ ರಂಜಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ (Nirmalanandanatha Swamiji) “ಮರವು ಹೇಗೆ ತನ್ನ ತನವನ್ನು ಕಾಯ್ದುಕೊಳ್ಳುತ್ತದೆಯೊ ಅದೇ ರೀತಿಯಲ್ಲಿ ವಿದ್ಯಾರ್ಥಿಗಳು ಸಹ ತಮ್ಮತನ ಕಾಯ್ದುಕೊಂಡು ಪೋಷಕರು ನೀಡಿರುವ ಸ್ವಾತಂತ್ರವನ್ನು ದುರುಪಯೋಗ ಪಡಿಸಿಕೊಳ್ಳಬಾರದು” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಟಿ ಕಾರುಣ್ಯ ರಾಮ್ (Karunya Ram), ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ ಎನ್.ಶಿವರಾಮರೆಡ್ಡಿ, ಪ್ರಾಂಶುಪಾಲ ಜಿ.ಟಿ.ರಾಜು, ಮಂಗಳಾನಂದನಾಥ ಸ್ವಾಮೀಜಿ, ವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಡಾ.ಕೆ.ಪಿ.ಶ್ರೀನಿವಾಸಮೂರ್ತಿ, ಕುಲಸಚಿವ ಜೆ.ಸುರೇಶ್ ಹಾಗೂ ಪ್ರಾಧ್ಯಾಪಕರು ಉಪಸ್ಥಿತರಿದ್ದರು.

You cannot copy content of this page

Exit mobile version