Home India Sonia Gandhi ಗೆ ಪೌರತ್ವಕ್ಕೂ ಮುನ್ನ ಮತದಾನದ ಹಕ್ಕು: BJP ಆರೋಪ, Congress ಸ್ಪಷ್ಟನೆ

Sonia Gandhi ಗೆ ಪೌರತ್ವಕ್ಕೂ ಮುನ್ನ ಮತದಾನದ ಹಕ್ಕು: BJP ಆರೋಪ, Congress ಸ್ಪಷ್ಟನೆ

Sonia Gandhi

New Delhi: ಸೋನಿಯಾ ಗಾಂಧಿ (Sonia Gandhi) ಅವರು ಭಾರತೀಯ ಪೌರತ್ವ ಪಡೆಯುವ ಮೊದಲುಲೇ ಕಾಂಗ್ರೆಸ್ ಪಕ್ಷವು ಅವರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿತ್ತು. ಬಿಜೆಪಿ ವಕ್ತಾರ ಅಮಿತ್ ಮಾಳವೀಯ ಅವರ ಪ್ರಕಾರ, ಇದು ದೇಶದ ಚುನಾವಣಾ ನಿಯಮ ಉಲ್ಲಂಘನೆ. ಸೋನಿಯಾ ಅವರು ಇಟಲಿಯ ಪ್ರಜೆಯಾಗಿದ್ದರೂ, 3 ವರ್ಷಗಳ ಮೊದಲೇ ಅವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿತ್ತು. 1982ರಲ್ಲಿ ಆ ಹೆಸರು ತೆಗೆದು, 1983 ಜನವರಿಯಲ್ಲಿ ಮತ್ತೆ ಸೇರಿಸಲಾಯಿತು. ಇದೇ ವರ್ಷದ ಏಪ್ರಿಲ್ 30ರಂದು ಅವರಿಗೆ ಭಾರತೀಯ ಪೌರತ್ವ ದೊರಕಿತು ಎಂದು ಬಿಜೆಪಿ ಆರೋಪಿಸಿದೆ.

ಕಾಂಗ್ರೆಸ್ ಸಂವಿಧಾನ ವಿರೋಧಿ ರೀತಿಯಲ್ಲಿ ನಡೆದುಕೊಂಡಿದೆ, ನಾಗರಿಕರಲ್ಲದವರಿಗೆ ಮತದಾನದ ಹಕ್ಕು ನೀಡಿದೆ.

ಇದಕ್ಕೆ ಕಾಂಗ್ರೆಸ್ ಪ್ರತಿಕ್ರಿಯಿಸಿ , ಸೋನಿಯಾ ಗಾಂಧಿ ಅವರು ಸ್ವತಃ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವಂತೆ ಕೇಳಿರಲಿಲ್ಲ, ತಪ್ಪು ಅಂದಿನ ಚುನಾವಣಾಧಿಕಾರಿಗಳಿಂದ ನಡೆದಿದೆ ಎಂದು ವಕ್ತಾರ ತಾರಿಕ್ ಅನ್ವರ್ ಹೇಳಿದ್ದಾರೆ. ಚುನಾವಣೆ ಆಯೋಗವು ಸ್ವತಂತ್ರವಾಗಿ ಕೆಲಸ ಮಾಡಬೇಕು, ಬಿಜೆಪಿ ಒತ್ತಡಕ್ಕೆ ಒಳಗಾಗಬಾರದು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version