Home Business Stock market crash: ಕಾರಣಗಳು ಮತ್ತು ಪರಿಣಾಮಗಳು

Stock market crash: ಕಾರಣಗಳು ಮತ್ತು ಪರಿಣಾಮಗಳು

Stock market crash

ಭಾರತದ ಷೇರು ಮಾರುಕಟ್ಟೆ ಇವತ್ತು (ಫೆ. 3) ಸಾಧಾರಣ ಕುಸಿತ (Stock market crash) ಕಾಣುತ್ತಿದೆ. Sensex 700 ಅಂಕಗಳನ್ನು ಕಳೆದುಕೊಂಡಿದ್ದು, Nifty ಕೂಡ 200 ಅಂಕಗಳನ್ನು ನಷ್ಟವಾಗಿದೆ. FMCG ವಲಯ ಹೊರತುಪಡಿಸಿದ ಇನ್ನಿತರ ಸೂಚ್ಯಂಕಗಳು ನಷ್ಟ ಕಂಡಿವೆ.

ಟ್ರಂಪ್ ಎಫೆಕ್ಟ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚೀನಾ, ಕೆನಡಾ ಮತ್ತು ಮೆಕ್ಸಿಕೋ ಮೇಲೆ ವಿಧಿಸಿದ ಹೊಸ ತೆರಿಗೆಗಳು ಜಾಗತಿಕ ಆರ್ಥಿಕತೆಯನ್ನು ಅಲುಗಾಡಿಸಬಹುದು. ಹೂಡಿಕೆದಾರರ ಮೇಲೆ ಈ ಬದಲಾವಣೆಗಳು ಪ್ರಭಾವ ಬೀರುವ ಸಾಧ್ಯತೆ ಇದೆ.

ಜಾಗತಿಕ ಮಾರುಕಟ್ಟೆ ಪರಿಣಾಮ: ಟ್ರಂಪ್‌ನ ಕ್ರಮಗಳಿಂದ ಜಪಾನಿನ ನಿಕ್ಕೀ ಮತ್ತು ಕೊರಿಯಾದ ಕೋಸ್ಪಿ ಇಂಡೆಕ್ಸ್ ಗಳು ಕುಸಿತ ಕಂಡಿವೆ, ಇದರಿಂದ ಭಾರತೀಯ ಮಾರುಕಟ್ಟೆಗೆ ಕೂಡ ಪರಿಣಾಮ ಬೀರಬಹುದು.

ರೂಪಾಯಿ ಮೌಲ್ಯ ಕುಸಿತ: ಭಾರತೀಯ ರೂಪಾಯಿ ಡಾಲರ್ ಎದುರು 87 ಗಡಿ ದಾಟಿದೆ. ಟ್ರಂಪ್ ಅವರ ತೆರಿಗೆ ಕ್ರಮಗಳು ಡಾಲರ್‌ಗೆ ಬಲ ನೀಡಿದ್ದು, ಈ ಕಾರಣದಿಂದ ರೂಪಾಯಿ ಇನ್ನಷ್ಟು ಮೌಲ್ಯ ಕಳೆದುಕೊಂಡಿದೆ.

RBI ಎಂಪಿಸಿ ಸಭೆ: ಭಾನುವಾರ (ಫೆ. 4) ಭಾರತೀಯ ರಿಸರ್ವ್ ಬ್ಯಾಂಕ್ ಎಂಪಿಸಿ ಸಭೆ ಆರಂಭವಾಗುತ್ತಿದೆ, ಮತ್ತು ರಿಪೋ ದರ ಇಳಿಸುವ ನಿರ್ಧಾರ ಹೊರಬರುವ ಸಾಧ್ಯತೆ ಇದೆ. ಹೂಡಿಕೆದಾರರು ಮುನ್ನೆಚ್ಚರಿಕೆಯಾಗಿ ಷೇರುಗಳನ್ನು ಮಾರಬಹುದು.

ವಿದೇಶೀ ಹೂಡಿಕೆಗಳ ಹೊರಹರಿವು: ವಿದೇಶೀ ಸಾಂಸ್ಥಿಕ ಹೂಡಿಕೆಗಳು ಹಿನ್ನಡೆಯನ್ನು ಅನುಸರಿಸಿ, ಭಾರತೀಯ ಷೇರು ಮಾರುಕಟ್ಟೆಯಿಂದ ನಿರ್ಗಮಿಸುತ್ತಿವೆ. ಕಳೆದ ನಾಲ್ಕು ತಿಂಗಳಲ್ಲಿ 2.7 ಲಕ್ಷ ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಲಾಗಿದೆ.

ಈ ಎಲ್ಲಾ ಕಾರಣಗಳಿಂದ ಭಾರತದಲ್ಲಿ ಷೇರು ಮಾರುಕಟ್ಟೆ ಕುಸಿಯುತ್ತಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version