Home Entertainment Rajamouli ಸಿನಿಮಾಗಳಲ್ಲೂ ಲಾಜಿಕ್ ಇರಲ್ಲ: Karan Johar

Rajamouli ಸಿನಿಮಾಗಳಲ್ಲೂ ಲಾಜಿಕ್ ಇರಲ್ಲ: Karan Johar

Rajamouli and Karan Johar

ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹರ್ (Karan Johar) ಅವರು ವರ್ಷಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಅಪಾರ ಅನುಭವವನ್ನು ಹೊಂದಿರುವ ಅವರು ಅನೇಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿ, ಸ್ಟಾರ್ ಪದವಿ ಪಡೆಯಲು ಸಹಾಯ ಮಾಡಿದ್ದಾರೆ.

ಇತ್ತೀಚೆಗಷ್ಟೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು, ರಾಜಮೌಳಿ ಅವರ ಸಿನಿಮಾಗಳ ಬಗ್ಗೆ ಮಾತನಾಡುತ್ತಾ, “ರಾಜಮೌಳಿ ನಿರ್ದೇಶನ ಮಾಡಿದ ಚಿತ್ರಗಳಲ್ಲಿ ಲಾಜಿಕ್ ಇರುವುದಿಲ್ಲ” ಎಂದು ಹೇಳಿದ್ದಾರೆ.

“ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲೂ ಲಾಜಿಕ್ ಇಲ್ಲ. ಪ್ರೇಕ್ಷಕರ ನಂಬಿಕೆ ಬಲವಾಗಿದ್ದಾಗ ಲಾಜಿಕ್ ಪ್ರಶ್ನೆಯಾಗುವುದೇ ಇಲ್ಲ” ಎಂಬುದು ಕರಣ್ ಜೋಹರ್ ಅವರ ವಾದ.

“ನಂಬಿಕೆ ಬಹಳ ಮುಖ್ಯ. ದೊಡ್ಡ ನಿರ್ದೇಶಕರ ಸಿನಿಮಾಗಳ ಯಶಸ್ಸಿನ ಹಿಂದಿರುವುದು ನಂಬಿಕೇ. ರಾಜಮೌಳಿ ಅವರ ಯಾವುದೇ ಸಿನಿಮಾವನ್ನು ಉದಾಹರಣೆಯಾಗಿ ತೆಗೆದುಕೊಂಡರೂ, ಅಲ್ಲಿ ಲಾಜಿಕ್ ಕಡಿಮೆ, ನಂಬಿಕೆಯೇ ಹೆಚ್ಚಿರುತ್ತದೆ” ಎಂದು ಅವರು ಹೇಳಿದ್ದಾರೆ.

“ಒಬ್ಬ ವ್ಯಕ್ತಿ ಸಾವಿರ ಜನರನ್ನು ಹೊಡೆಯುವ ದೃಶ್ಯಗಳನ್ನಿಟ್ಟುಕೊಂಡು ಲಾಜಿಕ್ ಹುಡುಕುವುದು ಸಾರ್ಥಕವಲ್ಲ. ಉದಾಹರಣೆಗೆ, ಗದರ್ ಸಿನಿಮಾದ ನಿರ್ದೇಶಕ ಅನಿಲ್ ಶರ್ಮ ಅವರು ಸನ್ನಿ ಡಿಯೋಲ್ ಅದನ್ನು ಮಾಡಬಹುದು ಎಂಬ ನಂಬಿಕೆಯೊಂದಿಗೆ ಕಥೆ ಹೆಣಿದರು. ಲಾಜಿಕ್ ಬಗ್ಗೆ ಹೆಚ್ಚು ಚಿಂತಿಸಿದರೆ ಸಮಸ್ಯೆ ಶುರುವಾಗುತ್ತದೆ” ಎಂದು ಕರಣ್ ಜೋಹರ್ ಅಭಿಪ್ರಾಯಪಟ್ಟಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version