
Koppal: ತುಂಗಭದ್ರಾ ಜಲಾಶಯದ Crestgate (Tungabhadra Dam Crestgate) ಕೊಚ್ಚಿಕೊಂಡು ಹೋಗಿ ಹಲವು ತಿಂಗಳು ಕಳೆದರೂ, ನೂತನ ಗೇಟ್ ಅಳವಡಿಕೆ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ತಾತ್ಕಾಲಿಕವಾಗಿ ಸ್ಟಾಪ್ ಗೇಟ್ ಅಳವಡಿಸಲಾಗಿದೆ, ಆದರೆ ಮಳೆಗಾಲ ಮುನ್ನವೇ ನೂತನ ಗೇಟ್ ಅಳವಡಿಸುವ ಬಗ್ಗೆ ಅನುಮಾನಗಳಿವೆ.
ಉತ್ತರ ಕರ್ನಾಟಕ, ತೆಲಂಗಾಣ ಹಾಗೂ ಆಂಧ್ರಪ್ರದೇಶದ ಲಕ್ಷಾಂತರ ಜನರ ನೀರಿನ ಅವಶ್ಯಕತೆ ಪೂರೈಸುವ ತುಂಗಭದ್ರಾ ಜಲಾಶಯ, ಕೃಷಿ ಹಾಗೂ ಕುಡಿಯುವ ನೀರಿನ ಪ್ರಮುಖ ಆಧಾರವಾಗಿದೆ. ಆದರೆ, 2024ರ ಆಗಸ್ಟ್ 10ರಂದು 19ನೇ ಕ್ರೆಸ್ಟ್ಗೇಟ್ ಕೊಚ್ಚಿಕೊಂಡು ಹೋದ ಪರಿಣಾಮ ಅಪಾರ ಪ್ರಮಾಣದ ನೀರು ವ್ಯರ್ಥವಾಯಿತು.
ಜಲಾಶಯದ Crestgate ಮತ್ತು ಚೈನ್ಲಿಂಕ್ 50 ವರ್ಷಕ್ಕೊಮ್ಮೆ ಬದಲಾಯಿಸಬೇಕು. ಆದರೆ, 70 ವರ್ಷಗಳಿಂದ ಯಾವುದೇ ಬದಲಾವಣೆ ಮಾಡಲಾಗಿಲ್ಲ. ತಜ್ಞರು ಗೇಟ್ ಬದಲಾವಣೆ ಶಿಫಾರಸು ಮಾಡಿದರೂ, ಸಂಬಂಧಿತ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಬಗ್ಗೆ ಗಂಭೀರ ಚಿಂತನೆ ನಡೆಸಿದರೂ, ನಿರ್ಧಾರ ಇನ್ನೂ ಶೀಘ್ರಗೊಳಿಸಬೇಕಾಗಿದೆ. ತಾಂತ್ರಿಕ ತಜ್ಞರ ತಂಡ ಸ್ಥಳ ಪರಿಶೀಲನೆ ನಡೆಸಿದರೂ, ಗೇಟ್ ಬದಲಾವಣೆ ಬಗ್ಗೆ ಸ್ಪಷ್ಟ ಆದೇಶ ಇಲ್ಲ.
Crestgate ಬದಲಾಯಿಸಲು ಸಾಕಷ್ಟು ಸಮಯ ಬೇಕಾಗಿರುವುದರಿಂದ, ತಕ್ಷಣವೇ ತಯಾರಿಕೆ ಪ್ರಕ್ರಿಯೆ ಆರಂಭಿಸಬೇಕು. ಬದಲಾವಣೆ ವಿಳಂಬವಾದರೆ, ಮುಂಬರುವ ಮಳೆಗಾಲದಲ್ಲಿ ದೊಡ್ಡ ಅನಾಹುತ ಸಂಭವಿಸುವ ಅಪಾಯವಿದೆ. ಹೀಗಾಗಿ, ಬೇಸಿಗೆಯಲ್ಲಿಯೇ ಈ ಕಾರ್ಯವನ್ನು ಪೂರ್ಣಗೊಳಿಸುವಂತಾಗಿದೆ.