ಪ್ರಮುಖ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಈಥರ್ ಎನರ್ಜಿ (Ather Energy), ಎಲೆಕ್ಟ್ರಿಕ್ ವಾಹನಗಳ (EV) ಖರೀದಿಯನ್ನು ಉತ್ತೇಜಿಸಲು ಹೊಸ ಆಕರ್ಷಕ ಕೊಡುಗೆಯನ್ನು ಪರಿಚಯಿಸಿದೆ. ಗ್ರಾಹಕರಿಗೆ 100% ಆನ್-ರೋಡ್ ಲೋನ್ ಸೌಲಭ್ಯವನ್ನು ನೀಡಲು ಕಂಪನಿಯು ಹಲವಾರು ಹೆಸರಾಂತ ಹಣಕಾಸು ಸಂಸ್ಥೆಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡಿದ್ದು, ಇದು EV ಸ್ಕೂಟರ್ ಅನ್ನು ಕೊಳ್ಳಲು ಸುಲಭವಾಗಿಸಿದೆ.
ಹೊಸ ಯೋಜನೆಯ ಅಡಿಯಲ್ಲಿ ಕಂಪನಿಯು ಗ್ರಾಹಕರಿಗೆ ಸಾಲದ ಮೇಲೆ ಆಕರ್ಷಕವಾದ ಮಾಸಿಕ ಕಂತುಗಳನ್ನು (EMI ಗಳು) ನೀಡಲಿದೆ. ಜನಪ್ರಿಯ 450X ಮತ್ತು 450S ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಹೆಸರುವಾಸಿಯಾದ ಈಥರ್ ಎನರ್ಜಿ, 100% ಆನ್-ರೋಡ್ ಸಾಲವನ್ನು ಒದಗಿಸಲು IDFC ಫಸ್ಟ್ ಬ್ಯಾಂಕ್, HDFC, ICICI ಬ್ಯಾಂಕ್, ಬಜಾಜ್ ಫೈನಾನ್ಸ್, Axis ಬ್ಯಾಂಕ್, ಹೀರೋ ಫಿನ್ ಕಾರ್ಪ್ ಮತ್ತು ಚೋಳಮಂಡಲಂ ಫೈನಾನ್ಸ್‌ನಂತಹ ಬ್ಯಾಂಕ್‌ಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ.
ಈ ಕೊಡುಗೆಯ ಅಡಿಯಲ್ಲಿ, ಹೊಸ EV ಸ್ಕೂಟರ್‌ಗಳ ಖರೀದಿದಾರರು 60 ತಿಂಗಳವರೆಗಿನ ಲೋನ್ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು, ಕನಿಷ್ಠ ಮಾಸಿಕ EMI ಕೇವಲ ರೂ. 2,999 ಇರಲಿದೆ. ಈ ಆಫರ್ ಈಥರ್ ಎನರ್ಜಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೇಡಿಕೆಯನ್ನು ಹೆಚ್ಚಿಸುವ ನಿರೀಕ್ಷೆಯಿದ್ದು, ಮಾರುಕಟ್ಟೆಯಲ್ಲಿ ಹೆಚ್ಚಿನ ಸ್ಪರ್ಧೆಯನ್ನು ಸೃಷ್ಟಿಸುವ ನಿರೀಕ್ಷೆಯಿದೆ.