back to top
21.4 C
Bengaluru
Tuesday, October 7, 2025
HomeIndia11ನೇ International Yoga Day ಆಚರಣೆ

11ನೇ International Yoga Day ಆಚರಣೆ

- Advertisement -
- Advertisement -

ಬಳ್ಳಾರಿಯಲ್ಲಿ Yoga Day ಕಾರ್ಯಕ್ರಮ: ಬಳ್ಳಾರಿ ನಗರದ ಶೆಟ್ಟರ್ ಗುರು ಶಾಂತಪ್ಪ ಪದವಿ ಕಾಲೇಜಿನಲ್ಲಿ ಯೋಗ ದಿನಾಚರಣೆ (Yoga Day) ಕಾರ್ಯಕ್ರಮ ನಡೆಯಿತು. ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಅವರು ಮಾತನಾಡುತ್ತಾ, “ಯೋಗ ದಿನನಿತ್ಯ ಮಾಡಿದರೆ ದೇಹ ಮತ್ತು ಮನಸ್ಸು ಆರೋಗ್ಯವಾಗಿರುತ್ತವೆ, ಶಾಂತಿಯಾಗಿ ಬದುಕಬಹುದು,” ಎಂದು ತಿಳಿಸಿದರು.


ಈ ಕಾರ್ಯಕ್ರಮದಲ್ಲಿ ಹಲವಾರು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಯೋಗಾಭ್ಯಾಸಿಗಳೂ ಭಾಗವಹಿಸಿ ಸಾಮೂಹಿಕ ಯೋಗ ಪ್ರದರ್ಶನ ನೀಡಿದರು. ಶಾಸಕರು ಮತ್ತು ಸಚಿವರು ಗೈರುಹಾಜರಿದ್ದುದು ಗಮನ ಸೆಳೆದಿತು. 

ಹಾವೇರಿಯಲ್ಲಿ ಉತ್ಸವದ ರೀತಿ ಯೋಗ ಆಚರಣೆ: ಹಾವೇರಿಯ ರಜನಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ ಯೋಗ ದಿನಾಚರಣೆಯನ್ನು ಆಚರಿಸಿತು. ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ಸಿಇಒ ರುಚಿ ಬಿಂದಾಲ್ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು. 

ಜಿಲ್ಲೆಯಾದ್ಯಂತ ಸಾವಿರಾರು ವಿದ್ಯಾರ್ಥಿಗಳು, ಅಧಿಕಾರಿಗಳು, ಜನಪ್ರತಿನಿಧಿಗಳು ಯೋಗಾಸನಗಳಲ್ಲಿ ಪಾಲ್ಗೊಂಡರು. ಸೂರ್ಯ ನಮಸ್ಕಾರ, ಶವಾಸನ, ಪದ್ಮಾಸನ ಮುಂತಾದ ಯೋಗ ಭಂಗಿಗಳನ್ನು ಅಭ್ಯಾಸ ಮಾಡಲಾಯಿತು. 

ದಾವಣಗೆರೆಯಲ್ಲಿ ಸಾಮೂಹಿಕ ಯೋಗ ಪ್ರದರ್ಶನ: ದಾವಣಗೆರೆ ಹೈಸ್ಕೂಲ್ ಮೈದಾನದಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಿತು. ಜಿಲ್ಲಾಡಳಿತ, ಆಯುಷ್ ಇಲಾಖೆ ಹಾಗೂ ಇನ್ನಿತರೆ ಸಂಘಟನೆಗಳು ಸೇರಿ ಇದನ್ನು ಆಯೋಜಿಸಿದ್ದವು.


ಯೋಗಗುರು ಜ್ಯೋತಿ ಚನ್ನಬಸವಣ್ಣ ನೇತೃತ್ವದಲ್ಲಿ ವಿವಿಧ ಯೋಗಭಂಗಿಗಳ ಪ್ರದರ್ಶನ ನಡೆಯಿತು. ಸಂಸದೆ ಪ್ರಭಾ ಮಲ್ಲಿಕಾರ್ಜುನ್, ಡಿಸಿ ಡಾ. ಗಂಗಾಧರಸ್ವಾಮಿ, ಎಸ್.ಪಿ ಉಮಾ ಪ್ರಶಾಂತ್ ಸೇರಿದಂತೆ ಅಧಿಕಾರಿಗಳು ಯೋಗದಲ್ಲಿ ಭಾಗವಹಿಸಿದರು. 

ಮೈಸೂರನ್ನು ‘ಯೋಗ ಜಿಲ್ಲೆ’ಗೊಳಿಸುವ ಗುರಿ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, “ಮೈಸೂರಿನ ಪ್ರತೀ ಮನೆಗೆ ಯೋಗ ತಲುಪಿಸುವ ಗುರಿಯಿದೆ” ಎಂದು ವಿಧಾನಸೌಧದ ಮುಂಭಾಗದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಹೇಳಿದರು. ವಿಧಾನಪರಿಷತ್ ಸಭಾಪತಿ ಹೊರಟ್ಟಿ ಅವರು ಶಾಲೆಗಳಲ್ಲಿ ಯೋಗ ಕಡ್ಡಾಯಗೊಳಿಸುವ ಮನವಿ ಮಾಡಿದ್ದು, ಈ ಬಗ್ಗೆ ಶಿಕ್ಷಣ ಸಚಿವರೊಂದಿಗೆ ಚರ್ಚಿಸುತ್ತೇನೆ ಎಂದು ಸಚಿವರು ಹೇಳಿದರು. 

ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕಲಾವಿದರು ಶೈನ್ ಶೆಟ್ಟಿ, ಅನಿರುದ್ಧ್, ಸಾನ್ಯ ಐಯ್ಯರ್ ಕೂಡ ಪಾಲ್ಗೊಂಡು ಯೋಗ ಪ್ರದರ್ಶನ ನೀಡಿದರು. 

ಮಂಗಳೂರಿನಲ್ಲಿ ವಿಶಿಷ್ಟ ಜಲಯೋಗ ಕಾರ್ಯಕ್ರಮ: ಮಂಗಳೂರಿನ ಈಜುಕೊಳದಲ್ಲಿ 40ಕ್ಕೂ ಹೆಚ್ಚು ಹವ್ಯಾಸಿ ಈಜುಗಾರರು ನೀರಿನಲ್ಲಿಯೇ ಯೋಗ ಆಸನಗಳನ್ನು ಪ್ರದರ್ಶಿಸಿದ ಜಲಯೋಗ ಕಾರ್ಯಕ್ರಮ ಆಯೋಜನೆಯಾಯಿತು. 

ಈಜುವಾಗಲೇ ಮಂಗಳೂರು ಮೀನುಗಾರಿಕಾ ವಿಶ್ವವಿದ್ಯಾಲಯದ ನಿವೃತ್ತ ಡೀನ್ ಎಸ್.ಎಂ. ಶಿವಪ್ರಕಾಶ್ ಅವರು ಪ್ರಧಾನಮಂತ್ರಿ ಮೋದಿ ಅವರಿಗೆ ಪತ್ರ ಬರೆದು ಎಲ್ಲರ ಗಮನ ಸೆಳೆದರು.


ಜಲಯೋಗವು ದೇಹದ ಸ್ನಾಯುಗಳ ಒತ್ತಡ ಕಡಿಮೆ ಮಾಡುತ್ತದೆ, ಶಾಂತಿ ಮತ್ತು ಶಕ್ತಿಯನ್ನು ನೀಡುತ್ತದೆ ಎಂಬುದಾಗಿ ಅವರು ಹೇಳಿದರು. 

ಈಜುತ್ತಲೇ ಪತ್ರ ಬರೆದ ಶಿವಪ್ರಕಾಶ್ ಅವರ ಪ್ರಯತ್ನ, ಈಜುಗಾರರ ಉತ್ಸಾಹ, ಮತ್ತು ಜಲಯೋಗದ ವಿಶಿಷ್ಟತೆ ಈ ಯೋಗ ದಿನಾಚರಣೆಯನ್ನು ಸ್ಮರಣೀಯವನ್ನಾಗಿ ಮಾಡಿತು.


‘ಒಂದು ಭೂಮಿ, ಒಂದು ಆರೋಗ್ಯ’ ಎಂಬ ಧ್ಯೇಯವಾಕ್ಯದಡಿಯಲ್ಲಿ ನಡೆದ ಈ ಕಾರ್ಯಕ್ರಮ, ಯೋಗದ ಮಹತ್ವವನ್ನು ಇನ್ನಷ್ಟು ಜನರಿಗೆ ತಲುಪಿಸುವಲ್ಲಿ ಸಹಕಾರಿಯಾಯಿತು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page