Home India Manipur ದಲ್ಲಿ 14 ಉಗ್ರರ ಬಂಧನ – ಅಪಾರ ಶಸ್ತ್ರಾಸ್ತ್ರ ವಶ

Manipur ದಲ್ಲಿ 14 ಉಗ್ರರ ಬಂಧನ – ಅಪಾರ ಶಸ್ತ್ರಾಸ್ತ್ರ ವಶ

14 terrorists arrested in Manipur

Imphal (Manipur): ಮಣಿಪುರದಲ್ಲಿ (Manipur) ಭದ್ರತಾ ಪಡೆಗಳು ಕಳೆದ 24 ಗಂಟೆಗಳಲ್ಲಿ 14 ಉಗ್ರರನ್ನು ಬಂಧಿಸಿದೆ. ಈ ಉಗ್ರರು ವಿವಿಧ ಭಯೋತ್ಪಾದಕ ಸಂಘಟನೆಗಳಿಗೆ ಸೇರಿದವರಾಗಿದ್ದಾರೆ. ಬಂಧಿತರಿಂದ ಶಸ್ತ್ರಾಸ್ತ್ರ, ಸ್ಫೋಟಕ, ನಗದು ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತರನ್ನು ತೌಬಾಲ್, ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ, ತೆಂಗ್ನೌಪಾಲ್, ಬಿಷ್ಣುಪುರ್ ಮತ್ತು ಜಿರಿಬಾಮ್ ಜಿಲ್ಲೆಗಳಿಂದ ಬಂಧಿಸಲಾಗಿದೆ. ಇವರಲ್ಲಿ,

  • ಇಂಫಾಲ್ ಪೂರ್ವ ಮತ್ತು ತೌಬಾಲ್ ಜಿಲ್ಲೆಗಳಿಂದ ತಲಾ 4 ಮಂದಿ
  • ತೆಂಗ್ನೌಪಾಲ್ ಜಿಲ್ಲೆಯಿಂದ 3 ಮಂದಿ
  • ಇತರ ಜಿಲ್ಲೆಗಳಿಂದ ತಲಾ ಒಬ್ಬರಂತೆ ಬಂಧಿಸಲಾಗಿದೆ.

ಇವರು ಕಾಂಗ್ಲೀಪಾಕ್ ಕಮ್ಯುನಿಸ್ಟ್ ಪಾರ್ಟಿ (KCP), ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್ (UNLF), ಪ್ರೆಪಾಕ್, ಮತ್ತು “ಸೋಷಿಯಲಿಸ್ಟ್ ರೆವಲ್ಯೂಷನರಿ ಪಾರ್ಟಿ ಆಫ್ ಕಾಂಗ್ಲೀಪಾಕ್ (SOREPA):” ಗೆ ಸೇರಿದವರಾಗಿದ್ದಾರೆ.

ಅವರು ಸರ್ಕಾರಿ ನೌಕರರು, ಗುತ್ತಿಗೆದಾರರು, ವ್ಯಾಪಾರಿಗಳು ಹಾಗೂ ಜನಸಾಮಾನ್ಯರಿಂದ ಹಣ ಸುಲಿಗೆ ಮಾಡುತ್ತಿದ್ದರೆಂದು ತಿಳಿದುಬಂದಿದೆ. ಬಂಧಿತರಿಂದ ಪಿಸ್ತೂಲು, ಗ್ರೆನೇಡ್, ಮೊಬೈಲ್ ಸೆಟ್‌ಗಳು, ವಾಹನಗಳು ಮತ್ತು ಇತರೆ ದಾಖಲೆಗಳು ವಶಪಡಿಸಲಾಗಿದೆ.

ಬಿಷ್ಣುಪುರ್ ಜಿಲ್ಲೆಯಲ್ಲಿ ಬಂಧಿತ ಯುಎನ್ಎಲ್ಎಫ್ ಉಗ್ರನಿಂದ ₹21.5 ಲಕ್ಷ ನಗದು ವಶಪಡಿಸಲಾಗಿದೆ. ಉಗ್ರರು ಗುಡ್ಡಪ್ರದೇಶ ಮತ್ತು ದುರ್ಗಮ ಪ್ರದೇಶಗಳಲ್ಲಿ ಅಡಗಿದ್ದನ್ನು ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಮೂಲಕ ಪತ್ತೆ ಹಚ್ಚಿವೆ.

ಚುರಾಚಂದ್‌ಪುರ್ ಜಿಲ್ಲೆಯ ಗೆಲ್ಮೋಲ್ ಗ್ರಾಮದ ಸ್ವಯಂಸೇವಕರ ತರಬೇತಿ ಶಿಬಿರವನ್ನೂ ಧ್ವಂಸಗೊಳಿಸಲಾಗಿದೆ.

ಕೊನೆಯ ಒಂದು ವಾರದಲ್ಲಿ ನಡೆದ ಸಂಯುಕ್ತ ಕಾರ್ಯಾಚರಣೆಗಳಲ್ಲಿ ಸೇನೆ, ಅಸ್ಸಾಂ ರೈಫಲ್ಸ್, ಸಿಆರ್ಪಿಎಫ್, ಬಿಎಸ್‌ಎಫ್, ಐಟಿಬಿಪಿ ಮತ್ತು ಮಣಿಪುರ ಪೊಲೀಸ್ ತಂಡಗಳು ಸೇರಿ 77 ಶಸ್ತ್ರಾಸ್ತ್ರಗಳು, ಗ್ರೆನೇಡ್  ಗಳು, ಸ್ಫೋಟಕಗಳು ಮತ್ತು ಯುದ್ಧ ಸಾಮಗ್ರಿಗಳನ್ನು ವಶಪಡಿಸಿವೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version