back to top
27 C
Bengaluru
Wednesday, September 17, 2025
HomeNewsUS ಪ್ರವಾಸಕ್ಕೆ ಇನ್ನು ಮುಂದೆ $15,000 ಬಾಂಡ್ ಕಡ್ಡಾಯ: Trump Government ಹೊಸ ನಿಯಮ

US ಪ್ರವಾಸಕ್ಕೆ ಇನ್ನು ಮುಂದೆ $15,000 ಬಾಂಡ್ ಕಡ್ಡಾಯ: Trump Government ಹೊಸ ನಿಯಮ

- Advertisement -
- Advertisement -

New York (USA): ಅಕ್ರಮ ವಲಸೆ ತಡೆಯುವ ಉದ್ದೇಶದಿಂದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ನಿಯಮವನ್ನು (Trump government) ಜಾರಿಗೆ ತರಲು ಮುಂದಾಗಿದ್ದಾರೆ. ಈ ನಿಯಮದಂತೆ, ಇನ್ನು ಮುಂದೆ ಪ್ರವಾಸ ಅಥವಾ ವ್ಯಾಪಾರ ವೀಸಾ (B1/B2) ಪಡೆಯಲು ಇಚ್ಛಿಸುವ ವಿದೇಶಿಗರು $15,000 (ಅಂದರೆ ಸುಮಾರು ₹12 ಲಕ್ಷ) ವನ್ನು ಬಾಂಡ್ ರೂಪದಲ್ಲಿ ಇಡಬೇಕಾಗುತ್ತದೆ.

ಈ ನಿಯಮವು ಪ್ರವಾಸಿ ವೀಸಾದ ಅವಧಿ ಮುಗಿದರೂ ವಿದೇಶಿಗರು ಅಮೆರಿಕದಲ್ಲೇ ಉಳಿಯುವುದನ್ನು ತಪ್ಪಿಸುವ ಉದ್ದೇಶದಿಂದ ತರಲಾಗುತ್ತಿದೆ. “ವೀಸಾ ಬಾಂಡ್ ಪೈಲಟ್ ಕಾರ್ಯಕ್ರಮ”ವೆಂಬ ಹೆಸರಿನಲ್ಲಿ ಈ ಯೋಜನೆನ್ನು ತರಲಾಗುತ್ತಿದ್ದು, ಆರಂಭದಲ್ಲಿ 12 ತಿಂಗಳ ಅವಧಿಗೆ ಪ್ರಯೋಗಾತ್ಮಕವಾಗಿ ಜಾರಿಗೆ ಬರಲಿದೆ.

ಯಾವ ದೇಶಗಳು ಈ ನಿಯಮದ ವ್ಯಾಪ್ತಿಗೆ ಬರಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವಿದೇಶಾಂಗ ಇಲಾಖೆ ಈ ನಿಯಮ ಜಾರಿಗೆ ಬರುವ 15 ದಿನಗಳ ಒಳಗಾಗಿ ಸಂಬಂಧಿತ ದೇಶಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಅಗತ್ಯವಿದ್ದರೆ ನಿಯಮಗಳಲ್ಲಿ ತಿದ್ದುಪಡಿ ಮಾಡುವ ಸಾಧ್ಯತೆಯೂ ಇದೆ.

ಟ್ರಂಪ್ ಅವರು ತಮ್ಮ ಚುನಾವಣಾ ಭಾಷಣದಲ್ಲಿ ಅಕ್ರಮ ವಲಸೆ ತಡೆಯುವ ಬಗ್ಗೆ ಮಾತುಗಳನ್ನಾಡಿದ್ದರ ಸಮರ್ಪಕವಾಗಿ, ಈಗಾಗಲೇ ಈ ಸಂಬಂಧ ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಸಾವಿರಾರು ಪ್ರವಾಸಿಗರು ತಮ್ಮ ವೀಸಾ ಅವಧಿ ಮುಗಿದರೂ ಅಮೆರಿಕದಿಂದ ಹಿಂತಿರುಗದೆ ಅಲ್ಲಿಯೇ ಉಳಿಯುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಈ ಬಾಂಡ್ ನಿಯಮ ತರಲಾಗಿದೆ.

ಈ ಹೊಸ ನೀತಿ 2026ರ ಆಗಸ್ಟ್ 5ರಿಂದ ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page