FIDE ಗ್ರ್ಯಾಂಡ್ ಸ್ವಿಸ್ 2025ರಲ್ಲಿ ಭಾರತದ ಚೆಸ್ ತಾರೆ ಮತ್ತು ವಿಶ್ವ ಚಾಂಪಿಯನ್ ಗುಕೇಶ್ (World Chess Champion Gukesh) ಅವರನ್ನು ಅಮೆರಿಕದ ಗ್ರ್ಯಾಂಡ್ ಮಾಸ್ಟರ್ ಅಭಿಮನ್ಯು ಮಿಶ್ರಾ ಸೋಲಿಸಿ ಇತಿಹಾಸ ರಚಿಸಿದ್ದಾರೆ. ಉಜ್ಬೇಕಿಸ್ತಾನಿನ ಸಮರ್ಕಂದ್ನಲ್ಲಿ ನಡೆದ ಐದನೇ ಸುತ್ತಿನಲ್ಲಿ ಅಭಿಮನ್ಯು ಮಿಶ್ರಾ ಗೆಲುವು ಸಾಧಿಸಿದ್ದಾರೆ.
ಇದರಿಂದ ಚೆಸ್ ಇತಿಹಾಸದಲ್ಲಿ ಗ್ರ್ಯಾಂಡ್ ಮಾಸ್ಟರ್ ಆದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ಹೊಂದಿರುವ ಭಾರತೀಯ ಮೂಲದ ಅಮೇರಿಕನ್ ಚೆಸ್ ಆಟಗಾರ ಅಭಿಮನ್ಯು, ಕೇವಲ 16 ವರ್ಷದ ವಯಸ್ಸಿನಲ್ಲಿ ಹಾಲಿ ವಿಶ್ವ ಚೆಸ್ ಚಾಂಪಿಯನ್ ಅನ್ನು ಸೋಲಿಸಿದ ಅತ್ಯಂತ ಕಿರಿಯ ಆಟಗಾರನಾಗಿ ಹೆಗ್ಗಳಿಕೆ ಪಡೆದಿದ್ದಾರೆ.
ಗುಕೇಶ್ ವಿರುದ್ಧ ಗೆಲುವು ಸಾಧಿಸಿದರೂ, ಅಭಿಮನ್ಯು ತಮ್ಮ ಪ್ರದರ್ಶನದಿಂದ ತೃಪ್ತರಾಗಿರಲಿಲ್ಲ. ಅವರು ಹೇಳಿದ್ದು, “ನನ್ನ ಗೆಲುವಿನ ಹೊರತಾಗಿ, ಈ ಪಂದ್ಯಾವಳಿ ಹಿಂದೆ ನಡೆದಂತ ಖುಷಿಯನ್ನು ನೀಡಲಿಲ್ಲ. ಆದರೂ ನಾನು ಊಹಿಸಿದ್ದಕ್ಕಿಂತ ಉತ್ತಮವಾಗಿ ಪಂದ್ಯಾವಳಿಗಳು ನಡೆದಿವೆ. ಈ ಫಾರ್ಮ್ ಮುಂದುವರಿಸಿದರೆ ಟೂರ್ನಮೆಂಟ್ ಗೆಲ್ಲುವ ಅವಕಾಶ ಸಿಗಲಿದೆ. ನಿನ್ನೆಯೂ ಸಹ ನಾನು ಪ್ರಜ್ಞಾನಂದ್ ವಿರುದ್ಧ ಕೆಲವು ತಪ್ಪುಗಳನ್ನು ಮಾಡಿದ್ದೆ, ಆದರೆ ಗುಕೇಶ್ ವಿರುದ್ಧ ನಾನು ಹಿಂದೆ ಉಳಿದಿಲ್ಲ; ನಾನು ಅವರೊಂದಿಗೆ ಸಮಾನ ಆಟ ನಡೆಸಿದೆನೆ ಎಂದು ಭಾವಿಸುತ್ತೇನೆ.”
ಅಭಿಮನ್ಯು ಅವರು ಗುಕೇಶ್ ಆಟದ ಶೈಲಿಯಿಂದ ಬಹಳ ಕಲಿತಿದ್ದಾರೆ. ಅವರಿಗೆ ಗುಕೇಶ್ ಆರಂಭಿಕ ವಿಧಾನ ತುಂಬ ಇಷ್ಟವಾಯಿತು. ಇದಕ್ಕೂ ಮೊದಲು, ಅವರು ಅಗ್ರ ಶ್ರೇಯಾಂಕಿತ ಪ್ರಜ್ಞಾನಂದ್ ವಿರುದ್ಧ ನಡೆದ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದರು.
ಗುಕೇಶ್ ಮತ್ತು ಅರ್ಜುನ ನಡುವೆ ನಡೆದ ಪಂದ್ಯವೂ ಡ್ರಾ ಆಗಿ ಕೊನೆಗೊಂಡಿತು. FIDE ಕ್ಲಾಸಿಕಲ್ ಶ್ರೇಯಾಂಕದಲ್ಲಿ ಐದನೇ ಸ್ಥಾನದಲ್ಲಿರುವ ಅರ್ಜುನ ಎರಿಗೈಸಿ ಮತ್ತು ಆರನೇ ಸ್ಥಾನದಲ್ಲಿರುವ ಗುಕೇಶ್ ನಡುವಿನ ಬಹುನಿರೀಕ್ಷಿತ ಪಂದ್ಯ ಡ್ರಾ ಆಗಿ ಅಂತ್ಯಗೊಂಡಿತು.
ಇದಲ್ಲದೆ, ದಿವ್ಯಾದೇಶ್ಮುಖ್ FIDE ರೇಟಿಂಗ್ನಲ್ಲಿ ಭಾರತೀಯ ಆಟಗಾರ್ತಿಗಿಂತ 666 ಸ್ಥಾನ ಮೇಲಿರುವ ಬಾಸ್ಸೆಮ್ ಅವರನ್ನು ಸೋಲಿಸಿ ಗೆಲುವು ಸಾಧಿಸಿದರು. ಆರಂಭಿಕ ಚಲನೆಗಳಲ್ಲಿ ಕಠಿಣ ಸ್ಥಿತಿಯಲ್ಲಿದ್ದರೂ, ದಿವ್ಯಾ ತಮ್ಮ ಹೋರಾಟವನ್ನು ಮುಂದುವರೆಸಿ 48 ಚಲನೆಗಳಲ್ಲಿ ಎದುರಾಳಿಯನ್ನು checkmating ಮಾಡಿ ಜಯಸ್ವಿಯಾಗಿ ಫಿನಿಶ್ ಮಾಡಿದ್ದಾರೆ.