ದೆಹಲಿ: 1984ರ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ (1984 anti-Sikh riots case) ಕಾಂಗ್ರೆಸ್‌ನ ಮಾಜಿ ಸಂಸದ ಸಜ್ಜನ್ ಕುಮಾರ್ (MP Sajjan Kumar) ಅವರಿಗೆ ದೆಹಲಿಯ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದೆ. ರೌಸ್ ಅವೆನ್ಯೂ ನ್ಯಾಯಾಲಯವು ಫೆಬ್ರವರಿ 18 ರಂದು ಅವರ ಶಿಕ್ಷೆಗೆ ಸಂಬಂಧಿಸಿದ ವಿಚಾರಣೆಯನ್ನು ಹಮ್ಮಿಕೊಂಡಿದೆ. ಸಜ್ಜನ್ ಕುಮಾರ್ ಅವರು ಈ ವೇಳೆ ದೆಹಲಿಯ ಕಂಟೋನ್ಮೆಂಟ್ ನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ಪ್ರಕರಣವು 1984 ರ ಸಿಖ್ ವಿರೋಧಿ ಗಲಭೆಯ ವೇಳೆ ದೆಹಲಿಯ ಸರಸ್ವತಿ ವಿಹಾರ್ ನಲ್ಲಿ ನಡೆದ ಇಬ್ಬರ ಹತ್ಯೆಗೆ ಸಂಬಂಧಿಸಿದೆ.