HomeIndia2011ರ Murder case: ಛೋಟಾ ರಾಜನ್ ಖುಲಾಸೆ

2011ರ Murder case: ಛೋಟಾ ರಾಜನ್ ಖುಲಾಸೆ

- Advertisement -
- Advertisement -

New Delhi: 2011ರಲ್ಲಿ ದಾವೂದ್ ಇಬ್ರಾಹಿಂನ (Dawood Ibrahim) ಸಹೋದರ ಇಕ್ಬಾಲ್ ಕಸ್ಕರ್ ಅವರ ಚಾಲಕನ ಹತ್ಯೆ ಪ್ರಕರಣದಲ್ಲಿ ಭೂಗತ ಪಾತಕಿ ಛೋಟಾ ರಾಜನ್ ಖುಲಾಸೆಗೊಂಡಿದ್ದಾರೆ. ಮುಂಬೈನ ವಿಶೇಷ ನ್ಯಾಯಾಲಯ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಮೋಕಾ) ಅಡಿಯಲ್ಲಿ ಈ ತೀರ್ಪು ನೀಡಿದೆ.

ಮುಂಬೈನ ವಿಶೇಷ ನ್ಯಾಯಾಧೀಶ ಎ.ಎಂ. ಪಾಟೀಲ್, ಛೋಟಾ ರಾಜನ್ ವಿರುದ್ಧ ಸಾಕ್ಷ್ಯಾಧಾರಗಳಿಲ್ಲದ ಕಾರಣ ಅವರನ್ನು ಖುಲಾಸೆಗೊಳಿಸಿದ್ದಾರೆ. ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿರುವ ರಾಜನ್, ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾಗಿದ್ದರು. “ಯಾವುದೇ ಅಪರಾಧ ಪ್ರಕರಣದಲ್ಲಿ ಅವರ ಅಗತ್ಯವಿಲ್ಲದಿದ್ದರೆ, ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು” ಎಂದು ನ್ಯಾಯಾಲಯ ಆದೇಶಿಸಿದೆ.

2011ರ ಮೇ 17ರಂದು, ದಕ್ಷಿಣ ಮುಂಬೈನಲ್ಲಿ ಆರಿಫ್ ಅಬುನಾಕರ್ ಸಯ್ಯದ್ ಎಂಬುವವರ ಮೇಲೆ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿದ್ದರು. ಸಯ್ಯದ್, ಪರಾರಿಯಾಗಿರುವ ದಾವೂದ್ ಇಬ್ರಾಹಿಂನ ಸಹೋದರ ಇಕ್ಬಾಲ್ ಕಸ್ಕರ್ ಅವರ ಚಾಲಕ ಮತ್ತು ಅಂಗರಕ್ಷಕರಾಗಿದ್ದರು.

ಭಾರತೀಯ ದಂಡ ಸಂಹಿತೆ (IPC), MCOCA ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ, ಈ ಕೊಲೆ ಛೋಟಾ ರಾಜನ್ ಅವರ ಸೂಚನೆಯ ಮೇರೆಗೆ ನಡೆದಿದ್ದರೆಂದು ಪೊಲೀಸರು ಆರೋಪಿಸಿದ್ದರು. ಪ್ರಸ್ತುತ, ಛೋಟಾ ರಾಜನ್ ಪತ್ರಕರ್ತ ಜ್ಯೋತಿರ್ಮಯ್ ಡೇ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ ಮತ್ತು ಇತರ ಅಪರಾಧ ಪ್ರಕರಣಗಳಿಗೂ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!