ಭಾರತ ಮತ್ತು ರಷ್ಯಾ (Russia-India) ನಡುವಿನ ಸ್ನೇಹಭಾವವು ಪ್ರಪಂಚದಾದ್ಯಾಂತ ಗಮನ ಸೆಳೆದಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Prime Minister Narendra Modi and Russian President Vladimir Putin) ಎರಡೂ ದೇಶಗಳ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ನಾನಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.
ರಷ್ಯಾ 2025ರಿಂದ ಭಾರತೀಯರಿಗೆ ವೀಸಾ ಮುಕ್ತವಾಗಿ ಪ್ರವಾಸ ಮಾಡಲು ಅವಕಾಶ ನೀಡಲು ಮುಂದಾಗಿದೆ. ಇದು ಎರಡು ದೇಶಗಳ ನಡುವಿನ ಅತ್ಯುತ್ತಮ ಸ್ನೇಹವನ್ನು ಪ್ರತಿಬಿಂಬಿಸುವ ಮಹತ್ವಪೂರ್ಣ ಹೆಜ್ಜೆ. ಹೊಸ ವೀಸಾ ನಿಯಮದ ಪ್ರಕಾರ, ಭಾರತೀಯರು ಈಗ ವೀಸಾ ಇಲ್ಲದೆ ರಷ್ಯಾ ಪ್ರವಾಸಿಸಲು ಪರವಾನಗಿ ಪಡೆಯುತ್ತಾರೆ.
ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, ಈ ಹೊಸ ವೀಸಾ ನಿಯಮಗಳು ಜಾರಿಯಾದ ನಂತರ, ಭಾರತೀಯರು ವೀಸಾ ಇಲ್ಲದೆ ರಷ್ಯಾಕ್ಕೆ ಹೋಗಬಹುದು. ಅಲ್ಲದೇ, ಇ-ವೀಸಾಗಳು ಪ್ರಾರಂಭವಾದಾಗಿನಿಂದ, 2023 ರಲ್ಲಿ 60,000 ಕ್ಕೂ ಹೆಚ್ಚು ಭಾರತೀಯರು ರಷ್ಯಾಕ್ಕೆ ಭೇಟಿ ನೀಡಿದ್ದಾರೆ.
ಇದರ ಮೂಲಕ, ಭಾರತವು ವ್ಯಾಪಾರದ ಹಾಗೂ ಪ್ರವಾಸಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ರಷ್ಯಾಕ್ಕೆ ಪ್ರಯಾಣಿಸುತ್ತಿರುವ ಮೂರನೇ ಅಗ್ರ ದೇಶವಾಗಿದೆ. 2025 ರಿಂದ ಈ ಹೊಸ ನಿರ್ಧಾರವು ಭಾರತದ ಪ್ರವಾಸಿಗರಿಗೆ ಹೆಮ್ಮೆಯ ಸಂಗತಿಯಾಗಲಿದೆ.