Jodhpur: ಪೈಲಟ್ (Pilot) ಆಗಲು ಕನಸು ಕಂಡ 21 ವರ್ಷದ ಚೇತನಾ ಬಿಷ್ಣೋಯ್ ಅಪಘಾತದಲ್ಲಿ ಸಾವನ್ನಪ್ಪಿದ ನಂತರ, ಅವರ ಅಂಗಾಂಗ ದಾನದ ಮೂಲಕ ಐದು ಜನರಿಗೆ ಹೊಸ ಜೀವ ನೀಡಲು ಕಾರಣವಾದಿದ್ದಾರೆ.
ಪೋಖ್ರಾನ್ ನ ಖೆಟೋಲೈ ಮೂಲದ ಚೇತನಾ, ಮಹಾರಾಷ್ಟ್ರದ ರೆಡ್ಬರ್ಡ್ನಲ್ಲಿ ಪೈಲಟ್ ತರಬೇತಿ ಪಡೆಯುತ್ತಿದ್ದರು. ಡಿಸೆಂಬರ್ 9ರಂದು ಅಪಘಾತದಲ್ಲಿ ಅವರು ಗಂಭೀರವಾಗಿ ಗಾಯಗೊಂಡು, ಬ್ರೈನ್ ಡೆಡ್ ಆಗಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಕುಟುಂಬವು ತಮ್ಮ ಪುತ್ರಿಯನ್ನು ಕಳೆದು ನೋವಿನಲ್ಲಿ ಇದ್ದರೂ, ಅವಳನ್ನು ಮತ್ತೊಬ್ಬ ಜೀವದಲ್ಲಿ ಕಾಣುವ ನಿರ್ಧಾರವನ್ನು ತೆಗೆದುಕೊಂಡು, ಐದು ಅಂಗಾಂಗಗಳನ್ನು ದಾನ ಮಾಡಿದ್ದಾರೆ. ಚೇತನಾ ಅವರ ಹೃದಯ, ಲಿವರ್, ಎರಡೂ ಕಿಡ್ನಿ ಮತ್ತು ಮೇದೋಜೀರಕ ಗ್ರಂಥಿ ದಾನ ಮಾಡಲಾಯಿತು.
ಚೇತನಾ ಅವರ ಅಂಗಾಂಗಗಳನ್ನು ಪಡೆದ ಕುಟುಂಬವು, ಪುಣೆಯ ರೂಬಿ ಹಾಲ್ ಕ್ಲಿನಿಕ್ ನಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಕುಟುಂಬವು ಅವರ ಅಂತ್ಯಕ್ರಿಯೆವನ್ನು ಬುಧವಾರ ಸ್ವಗ್ರಾಮದಲ್ಲಿ ನೆರವೇರಿಸಿತು.