Home Auto Car 360 km ರೇಂಜ್ ಕೊಡುವ Hyundai Car ಲಾಂಚ್

360 km ರೇಂಜ್ ಕೊಡುವ Hyundai Car ಲಾಂಚ್

Hyundai High Range Small Car Inster Cross Launch

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ (Hyundai) ತನ್ನ ಹೊಸ ಇನ್‌ಸ್ಟರ್ ಕ್ರಾಸ್ (Inster Cross) ಅನ್ನು ಅನಾವರಣಗೊಳಿಸಿದೆ. ಇದು ಕೆಲವು ತಿಂಗಳ ಹಿಂದೆ ಅನಾವರಣಗೊಂಡ ಆಲ್-ಎಲೆಕ್ಟ್ರಿಕ್ ಇನ್‌ಸ್ಟರ್ ನ (all-electric Inster) ರೂಪಾಂತರವಾಗಿದೆ.

ಇನ್‌ಸ್ಟರ್ ಕ್ರಾಸ್ ಹೊಸ ಸ್ಟೈಲಿಂಗ್ ಅಂಗಳನ್ನು ಪಡೆದುಕೊಂಡಿದೆ. ಇದು ಹೆಚ್ಚು ಆಫ್-ರೋಡ್ ಲುಕ್ ಅನ್ನು ಹೊಂಡಿದೆ. ಕೊರಿಯಾದಲ್ಲಿರುವ ತನ್ನ ಸ್ಥಾವರದಲ್ಲಿ ಈ ವರ್ಷದ ಕೊನೆಯಲ್ಲಿ ವಾಹನದ ಉತ್ಪಾದನೆಯನ್ನು ಪ್ರಾರಂಭಿಸಲಾಗುವುದು ಎಂದು ಹುಂಡೈ ಹೇಳಿದೆ. ಈ ಹ್ಯುಂಡೈ ಇನ್‌ಸ್ಟರ್ ಕ್ರಾಸ್ (Hyundai Inster Cross) ಕಾರು ವಿದೇಶ ಮಾರುಕಟ್ಟೆಗಾಗಿ ಹ್ಯುಂಡೈ ಕಂಪನಿಯು ತರುತ್ತಿದೆ.

ಈ ಹ್ಯುಂಡೈ ಇನ್‌ಸ್ಟರ್ ಕ್ರಾಸ್ ಎಲೆಕ್ಟ್ರಿಕ್ SUVಯು ADAS ನಂತಹ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಇವುಗಳಲ್ಲಿ ಹೈವೇ ಡ್ರೈವಿಂಗ್ ಅಸಿಸ್ಟ್ 1.5, ಸ್ಮಾರ್ಟ್ ಕ್ರೂಸ್ ಕಂಟ್ರೋಲ್, ಫಾರ್ವರ್ಡ್ ಕೊಲಿಷನ್-ಅವಾಯಿಡೆನ್ಸ್ ಅಸಿಸ್ಟ್ 1, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ನ್ಯಾವಿಗೇಷನ್ ಡೇಟಾದೊಂದಿಗೆ ಲೇನ್ ಸೆಂಟರ್ ಮತ್ತು ಆಟೋ ಎಮರ್ಜೆನ್ಸಿ ಬ್ರೇಕಿಂಗ್ ಸಿಸ್ಟಂ ಅನ್ನು ಹೊಂದಿದೆ.

ಇನ್‌ಸ್ಟರ್ ಕಾರಿನಲ್ಲಿ 49kWh ಬ್ಯಾಟರಿ ಪ್ಯಾಕ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ. ದೊಡ್ಡ ಬ್ಯಾಟರಿ ಪ್ಯಾಕ್ WLTP ಸೈಕಲ್ನಲ್ಲಿ 360 ಕಿಮೀ ರೇಂಜ್ ಅನ್ನು ನೀಡುತ್ತದೆ. ಈ ಇವಿ 113 bhp ಪವರ್ ಮತ್ತು 147 Nm ಟಾರ್ಕ್ ಅನ್ನು ಉತ್ಪಾದಿಸುವ ಎಲೆಕ್ಟ್ರಿಕ್ ಮೋಟರ್ನಿಂದ ಚಾಲಿತವಾಗಿದೆ.

ಇವಿ 120kWh ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ರೀತಿಯಾಗಿ, ಬ್ಯಾಟರಿಯನ್ನು 30 ನಿಮಿಷಗಳಲ್ಲಿ 10-80 ಪ್ರತಿಶತದಿಂದ ಚಾರ್ಜ್ ಮಾಡಬಹುದು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version