back to top
20.2 C
Bengaluru
Saturday, July 19, 2025
HomeBusinessತಯಾರಿಕಾ ವಲಯ ಬಲವರ್ಧನೆಗೆ ರಾಜ್ಯದಲ್ಲಿ 6 Task Forces: Minister M.B. Patil

ತಯಾರಿಕಾ ವಲಯ ಬಲವರ್ಧನೆಗೆ ರಾಜ್ಯದಲ್ಲಿ 6 Task Forces: Minister M.B. Patil

- Advertisement -
- Advertisement -

Bengaluru: ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕವನ್ನು ಜಾಗತಿಕ ತಯಾರಿಕಾ ಕೇಂದ್ರವನ್ನಾಗಿ ಮಾಡುವುದು ಸರ್ಕಾರದ ಗುರಿಯಾಗಿದ್ದು, ಇದಕ್ಕಾಗಿ 6 ಪ್ರಮುಖ ವಲಯಗಳಿಗೆ ಪ್ರತ್ಯೇಕ ಟಾಸ್ಕ್ ಫೋರ್ಸ್ ಗಳನ್ನು (task forces) ರಚಿಸಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ (Minister M.B. Patil) ಹೇಳಿದ್ದಾರೆ.

ಈ ಯೋಜನೆಯ ಅಡಿಯಲ್ಲಿ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಿ, ಅವುಗಳನ್ನು ಮಂಗಳೂರು ಮತ್ತು ಚೆನ್ನೈ ಬಂದರುಗಳಿಗೆ ಉತ್ತಮ ಸಂಪರ್ಕ ಹೊಂದುವಂತೆ ಮಾಡಲಾಗುವುದು. ಜೊತೆಗೆ, ಸಮಗ್ರ ಕೈಗಾರಿಕಾ ಪಟ್ಟಣಗಳನ್ನು ನಿರ್ಮಿಸಲಾಗುತ್ತದೆ.

‘ಉತ್ಪಾದನಾ ಮಂಥನ’ ಎಂಬ ಸಮಾವೇಶದಲ್ಲಿ 60ಕ್ಕೂ ಹೆಚ್ಚು ಕಂಪನಿಗಳ 80 ಸಿಇಒ ಮತ್ತು ಮುಖ್ಯಸ್ಥರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಏರೋಸ್ಪೇಸ್, ಎಲೆಕ್ಟ್ರಾನಿಕ್ಸ್, ರೋಬೋಟಿಕ್ಸ್, ಆಟೋಮೊಬೈಲ್, ಎಲೆಕ್ಟ್ರಿಕ್ ವಾಹನಗಳು, ಟೆಕ್ಸ್ಟೈಲ್ಸ್, ಪಾದರಕ್ಷೆ, ಎಫ್ಎಂಸಿಜಿ ಉತ್ಪನ್ನಗಳಂತಹ ಕ್ಷೇತ್ರಗಳ ಕುರಿತು ಚರ್ಚೆ ನಡೆಯಿತು. ಈ ಎಲ್ಲ ವಲಯಗಳಿಗೆ ಪ್ರತ್ಯೇಕ ಟಾಸ್ಕ್ ಫೋರ್ಸ್ ಆಗುವುದು.

ಸಚಿವರ ಪ್ರಕಾರ, ರಾಜ್ಯ ತಯಾರಿಕಾ ವಲಯದಲ್ಲಿ ಮುಂಚೂಣಿಗೆ ಬರಬೇಕಾದ್ದರಿಂದ ‘ಫ್ರೀ ಟ್ರೇಡ್ ವೇರ್‌ಹೌಸಿಂಗ್ ಝೋನ್’, ರಫ್ತು ಆಧಾರಿತ ಕೈಗಾರಿಕಾ ಪಾರ್ಕುಗಳು, ಬಂದರು ಸಂಪರ್ಕ ಮುಂತಾದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗುವುದು. 2030ರ ಒಳಗಾಗಿ 7.5 ಲಕ್ಷ ಕೋಟಿ ರೂ. ಹೂಡಿಕೆಯನ್ನು ಆಕರ್ಷಿಸಿ, 20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಸರಕಾರ ಹೊಂದಿದೆ.

ಉದ್ಯಮಿಗಳು ಸರ್ಕಾರಕ್ಕೆ ಹಲವಾರು ಸಲಹೆಗಳನ್ನು ನೀಡಿದ್ದಾರೆ.

  • ಸೆಮಿಕಂಡಕ್ಟರ್ ಉದ್ಯಮಕ್ಕೆ ಅನುಕೂಲವಾಗುವ ಶಿಕ್ಷಣ ಕೋರ್ಸ್‌ಗಳು
  • ಸುಲಭ ಕಸ್ಟಮ್ಸ್ ವ್ಯವಸ್ಥೆ
  • ‘ಪ್ಲಗ್ ಅಂಡ್ ಪ್ಲೇ’ ಕೈಗಾರಿಕಾ ಪಟ್ಟಣ ನಿರ್ಮಾಣ
  • ಆಧುನಿಕ ತಯಾರಿಕಾ ಘಟಕಗಳು
  • ವಿದೇಶಗಳಲ್ಲಿ ವ್ಯಾಪಾರ ಕಚೇರಿ ಆರಂಭ
  • ಪರಿಸರ ಅನುಮೋದನೆ ಪ್ರಕ್ರಿಯೆ ಸುಲಭೀಕರಣ

ಸರ್ಕಾರ ಈ ಎಲ್ಲಾ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.

ವೈಮಾನಿಕ ಕ್ಷೇತ್ರಕ್ಕೆ ಬೇಕಾದ ವಿಶೇಷ ಲೋಹಗಳು, ಕಂಪೋಸಿಟ್ ಮೆಟೀರಿಯಲ್ಸ್ ತಯಾರಿಕೆಗಾಗಿ ಬೆಂಬಲ ನೀಡಲಾಗುವುದು. ವಿದ್ಯುತ್ ವಾಹನ ಉತ್ಪಾದನೆಗೆ ಬೇಕಾದ ಬ್ಯಾಟರಿ ಮತ್ತು ಬಿಡಿಭಾಗಗಳ ಕೈಗಾರಿಕಾ ಕ್ಲಸ್ಟರ್‌ಗಳನ್ನು ನಿರ್ಮಿಸಲಾಗುವುದು. ಗ್ರೀನ್ ಹೈಡ್ರೋಜನ್, ಮೆಡ್-ಟೆಕ್, ಎಂಆರ್‌ಒ, ಸ್ಪೇಸ್-ಟೆಕ್ ಮುಂತಾದ ಹೊಸ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿರಲಿ ಎಂಬುದು ಸರ್ಕಾರದ ದೃಷ್ಟಿಕೋಣವಾಗಿದೆ.

ಈ ಕಾರ್ಯಕ್ರಮದಲ್ಲಿ ದೇಶದ ಪ್ರಮುಖ ಉದ್ಯಮಿಗಳಾದ ಪ್ರಶಾಂತ್ ಪ್ರಕಾಶ್, ಅರವಿಂದ್ ಮೆಳ್ಳಿಗೇರಿ, ನಿರಂಜನ್ ನಾಯಕ್, ಅವಿನಾಶ ಅವುಲಾ, ಹಿರೇನ್ ಸೋಧಾ, ಪಿ.ಬಿ. ಆನಂದ್ ಮತ್ತು ದಿಲೀಪ್ ಛಾಬ್ರಿಯಾ ಮೊದಲಾದವರು ಭಾಗವಹಿಸಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page