Cairo (Egypt): ಯೆಮೆನ್ ಸಮುದ್ರ ತೀರದಲ್ಲಿ ಭಾನುವಾರ ಸಂಭವಿಸಿದ ದುರಂತದಲ್ಲಿ ದೋಣಿ ಮುಳುಗಿ ಕನಿಷ್ಠ 68 ಆಫ್ರಿಕನ್ ವಲಸಿಗರು ಸಾವನ್ನಪ್ಪಿದ್ದಾರೆ ಮತ್ತು 74 ಮಂದಿ ಇನ್ನೂ ಕಾಣೆಯಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ವಲಸೆ ಸಂಸ್ಥೆ (IOM) ತಿಳಿಸಿದೆ.
ಬಡತನ ಹಾಗೂ ಹಿಂಸೆಯಿಂದ ತಪ್ಪಿಸಿಕೊಳ್ಳಲು ಆಫ್ರಿಕದಿಂದ ನೂರಾರು ವಲಸಿಗರು ಶ್ರೀಮಂತ ಗಲ್ಫ್ ಅರಬ್ ರಾಷ್ಟ್ರಗಳ ಕಡೆಗೆ ತೆರಳುತ್ತಿದ್ದರು. ಈ ವೇಳೆ 154 ಇಥಿಯೋಪಿಯನ್ ವಲಸಿಗರನ್ನು ಹೊತ್ತ ದೋಣಿ ದಕ್ಷಿಣ ಯೆಮೆನ್‌ನ ಅಬ್ಯಾನ್ ಪ್ರದೇಶದ ಅಡೆನ್ ಕೊಲ್ಲಿಯಲ್ಲಿ ಮುಳುಗಿತು.
ಸ್ಥಳೀಯ ಅಧಿಕಾರಿಗಳ ಪ್ರಕಾರ, 54 ಶವಗಳು ಸಮುದ್ರ ತೀರಕ್ಕೆ ತಿಂದಿವೆ. ಉಳಿದ 14 ಶವಗಳನ್ನು ಜಿಂಜಿಬಾರ್‌ನ ಆಸ್ಪತ್ರೆಯ ಶವಾಗಾರಕ್ಕೆ ಕರೆದೊಯ್ಯಲಾಗಿದೆ. ಕಾಣೆಯಾಗಿರುವವರಿಗಾಗಿ ಶೋಧ ಹಾಗೂ ರಕ್ಷಣಾ ಕಾರ್ಯ ನಡೆಯುತ್ತಿದೆ.
ಯೆಮೆನ್, ದಶಕದ ಹಿಂದೆ ಆರಂಭವಾದ ಯುದ್ಧದ ನಡುವೆಯೂ ವಲಸಿಗರಿಗೆ ಗಲ್ಫ್ ದೇಶಗಳಿಗೆ ಹೋಗಲು ಪ್ರಮುಖ ಮಾರ್ಗವಾಗಿದೆ. ಅಪಾಯಕಾರಿ ಹಡಗು ಪ್ರಯಾಣದಿಂದ ಇತ್ತೀಚಿನ ದಿನಗಳಲ್ಲಿ ನೂರಾರು ವಲಸಿಗರು ಪ್ರಾಣ ಕಳೆದುಕೊಂಡಿದ್ದಾರೆ.
ಮಾರ್ಚ್‌ನಲ್ಲಿ ನಡೆದ ಒಂದು ದುರಂತದಲ್ಲಿ ನಾಲ್ಕು ದೋಣಿಗಳು ಮುಳುಗಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದರು ಮತ್ತು 186 ಮಂದಿ ಕಾಣೆಯಾಗಿದ್ದರು ಎಂದು IOM ಮಾಹಿತಿ ನೀಡಿದೆ.