New Delhi: 8ನೇ ವೇತನ ಆಯೋಗ (8th Pay Commission) ಮುಂದಿನ ವರ್ಷವೇ ಜಾರಿಯಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ. ಇದರಿಂದ ನೌಕರರಲ್ಲಿ ಮೂಲ ವೇತನ ಹೆಚ್ಚಳ, ಇತರ ಭತ್ಯೆಗಳ ಪರಿಷ್ಕರಣೆ ಲೆಕ್ಕಚಾರ ಮತ್ತೆ ಜೋರಾಗಿದೆ.
ಈ ವರ್ಷ ಕೇಂದ್ರವು ಜುಲೈ-ಡಿಸೆಂಬರ್ ಮಧ್ಯದ ಅವಧಿಯಲ್ಲಿ ತುಟ್ಟಿಭತ್ಯೆ (DA Hike) ಮತ್ತು ತುಟ್ಟಿ ಪರಿಹಾರ (DR Hike) ಶೆ. 3ರಷ್ಟು ಹೆಚ್ಚಿಸಿದೆ. ಮುಂದಿನ ವರ್ಷ ಜನವರಿಗೆ ಮತ್ತೆ ಡಿಎ ಹೆಚ್ಚಿಸಬೇಕಿದೆ.
ಇದರ ನಡುವೆ ಮುಂದಿನ ಹೊಸ ವೇತನ ಆಯೋಗವನ್ನು (8th Pay Commission) ಸ್ಥಾಪಿಸುವ ಕುರಿತು ಕೇಂದ್ರ ಸರ್ಕಾರವು 2025ರಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಮುಂದಿನ ವರ್ಷ 2025ರಲ್ಲಿ ಈ ಬಗ್ಗೆ ಅಧಿಕೃತ ನಿರ್ಧಾರ ಹೊರ ಬೀಳಲಿದೆ. ಇದರ ಘೋಷಣೆ ಕುರಿತು ಕೋಟ್ಯಂತರ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರು ಕಾಯುತ್ತಿದ್ದಾರೆ.
ಏಕೆಂದರೆ ವಿವಿಧ ಆರ್ಥಿಕ ಸೂಚಕಗಳನ್ನು, ವಿಶೇಷವಾಗಿ ಹಣದುಬ್ಬರದ ಪ್ರವೃತ್ತಿ ಸರಿದೂಗಿಸಲು, ನೌಕರರಿಗೆ ಆರ್ಥಿಕ ಬೆಂಬಲ ನೀಡಲು ಕೇಂದ್ರ ಸರ್ಕಾರ 10 ವರ್ಷಗಳಿಗೆ ಒಮ್ಮೆ ಈ ವೇತನ ಆಯೋಗ ಜಾರಿಗೆ ತರುತ್ತದೆ.
6 ಮತ್ತು 7 ನೇ ವೇತನ ಆಯೋಗದಲ್ಲಿ ನೌಕರರ ವೇತನ, ತುಟ್ಟಿಭತ್ಯೆ, ತುಟ್ಟಿಪರಿಹಾರ ಪರಿಷ್ಕರಣೆ ವೇಳೆ 3.68 ರ ಫಿಟ್ಮೆಂಟ್ ಅಂಶ ಪರಿಗಣಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರ ಆ ಫಿಟ್ಮೆಂಟ್ ಅಂಶ 2.57 ಕ್ಕೆ ನಿಗದಿಪಡಿಸಿತ್ತು. ಈ ಫಿಟ್ಮೆಂಟ್ ಅಂಶ ಆಧಾರದಲ್ಲಿ ನೌಕರರ ವೇತನ ಹೆಚ್ಚಳ ನಿರೀಕ್ಷಿಸಬಹುದಾಗಿದೆ.
ಈಗ ಎಂಟನೇ ವೇತನ ಆಯೋಗ ಜಾರಿಯಾದರೆ ಪಿಟ್ಮೆಂಟ್ ಅಂಶದಲ್ಲೂ ಮಹತ್ವದ ಬಲಾವಣೆ ಆಗಲಿದೆ. ಇದರಿಂದ ಮೂಲ ವೇತನ ಹೆಚ್ಚಾಗಬಹುದು ಎಂದು ನೌಕರರು ಕಾಯುತ್ತಿದ್ದಾರೆ.
8ನೇ ವೇತನ ಆಯೋಗದ ನಂತರ ಮ್ಯಾಟ್ರಿಕ್ಸ್ 1.92ರ ಫಿಟ್ಮೆಂಟ್ ಅಂಶವನ್ನು ಪರಿಗಣಿಸಿ ವೇತನ ನೀಡುವ ಸಾಧ್ಯತೆ ಇದೆ. ಕನಿಷ್ಠ ವೇತನ 18,000 ರೂ. ಇದ್ದು, ಅದು ಸುಮಾರು 34,560 ರೂ.ಗೆ ಪರಿಷ್ಕರಣೆಗೊಳ್ಳಬಹುದು.
ಅದರೊಂದಿಗೆ ಕನಿಷ್ಠ ಪಿಂಚಣಿ ಮೊತ್ತವು 17,280 ರೂಪಾಯಿಗೆ ಏರಬಹುದೆಂದೆಲ್ಲ ಲೆಕ್ಕಚಾರ ನೌಕರರಲ್ಲಿ ಮನೆ ಮಾಡಿದೆ.
ಸದ್ಯ ನೌಕರರು ಬಹುದಿನಗಳಿಂದ ಕಾಯ್ದಿದ್ದ ತುಟ್ಟಿಭತ್ಯೆ ಪರಿಹಾರ ಮೊನ್ನೆಯಷ್ಟೇ ಏರಿಕೆ ಆಗಿದೆ. ಶೇಕಡಾ 3ರಷ್ಟು DA ಏರಿಕೆಯಿಂದ ಅದರ ಪ್ರಮಾಣ ಶೇಕಡಾ 53 ರಷ್ಟು ಹೆಚ್ಚಳವಾಗಿದೆ. ಈ ಹಣವನ್ನು ಅವರು ದೀಪಾವಳಿಗೆ ಪಡೆಯಲಿದ್ದಾರೆ ಎನ್ನಲಾಗಿದೆ.