Maski, Raichur district : ದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ 800 ಮೀಟರ್ ಓಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಚಿನ್ನದ ಪದಕ ಪಡೆದು (Athletics Gold Medal) ಅಂತರರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿ ಸ್ವಗ್ರಾಮಕ್ಕೆ ಬಂದ ಕಮಲಾಕ್ಷಿಗೆ (Kamalakshi) ಹುಟ್ಟೂರಾದ ತಾಲ್ಲೂಕಿನ ತೀರ್ಥಭಾವಿ ಗ್ರಾಮದಲ್ಲಿ ಶನಿವಾರ ಗ್ರಾಮಸ್ಥರು ಆರತಿ ಬೆಳಗಿ ಅದ್ದೂರಿಯಾಗಿ ಬರಮಾಡಿಕೊಂಡು ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮಂತ ಮಾತನಾಡಿ ರಾಷ್ಟ್ರಮಟ್ಟದ (National Level) ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿಗೆ ಗ್ರಾಮ ಪಂಚಾಯಿತಿಯಿಂದ ಎಲ್ಲಾ ನೆರವು ನೀಡುವುದಾಗಿ ಭರವಸೆ ನೀಡಿದರು.
ವಿದ್ಯಾರ್ಥಿನಿಯ ತಂದೆ ದ್ಯಾಮನಗೌಡ. ಗ್ರಾಮ ಪಂಚಾಯಿತಿ ಸದಸ್ಯರಾದ ಬಸವರಾಜಪ್ಪಗೌಡ, ಕರಿಯಪ್ಪ, ವೀರೇಶ ತಳವಾರ, ಹನುಮಂತ ಸಿರವಾರ, ಸಂಗನಗೌಡ ಮಾಲಿ ಪಾಟೀಲ್ ದಳಪತಿ, ಚಿದಾನಂದಪ್ಪ ಸಿರವಾರ, ಕನಕರಾಯ ಸಜ್ಜಲಗುಡ್ಡ, ಮಂಜುನಾಥ ಮಾಲಿ ಪಾಟೀಲ್, ಅಮರಪ್ಪ ಮಾಸ್ತರ, ಸಣ್ಣಪ್ಪ ಸುಲ್ತಾನಪೂರ, ಅಮರೇಶ ಮಸ್ಕಿಯ ಭಗತ್ ಸಿಂಗ್ ತರಬೇತಿ ಸಂಸ್ಥೆಯ ಸಂಚಾಲಕ ಲಕ್ಷ್ಮಣ ಉಪಸ್ಥಿತರಿದ್ದರು.