back to top
25.3 C
Bengaluru
Tuesday, January 27, 2026
HomeKarnatakaBengaluru Urbanಬಾಲಗಂಗಾಧರನಾಥ ಸ್ವಾಮೀಜಿ ಜಯಂತ್ಯುತ್ಸವ

ಬಾಲಗಂಗಾಧರನಾಥ ಸ್ವಾಮೀಜಿ ಜಯಂತ್ಯುತ್ಸವ

- Advertisement -
- Advertisement -

Bengaluru (Bangalore) : ಬೆಂಗಳೂರಿನ BGS ಕ್ರೀಡಾಂಗಣ ಆವರಣದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ ಜಯಂತ್ಯುತ್ಸವ (Balagangadharanatha Swamiji Jayanti) ಅಂಗವಾಗಿ ಮಂಗಳವಾರ ವಿ.ಸೋಮಣ್ಣ (V. Somanna) ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಸಚಿವರಾದ ಮುನಿರತ್ನ, ವಿ.ಸೋಮಣ್ಣ ಪಾಲ್ಗೊಂಡು ಬಾಲಗಂಗಾಧರನಾಥ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ವಿ.ಸೋಮಣ್ಣ “ಕೋಟ್ಯಂತರ ಜನರಿಗೆ ಅನ್ನ, ಅಕ್ಷರ ಮತ್ತು ಆಶ್ರಯ ನೀಡುವ ಮೂಲಕ ಅವುಗಳ ಮಹತ್ವವನ್ನು ವಿಶ್ವಕ್ಕೆ ಸಾರಿದ ಬಾಲಗಂಗಾಧರನಾಥ ಸ್ವಾಮೀಜಿ ಹಾಗೂ ಶಿವಕುಮಾರ ಸ್ವಾಮೀಜಿ ಸಮಾಜದ ಎರಡು ಕಣ್ಣುಗಳು ಇದ್ದಂತೆ. ನನ್ನ ಜೀವನಕ್ಕೆ ಶಕ್ತಿ ತುಂಬಿದ ಶ್ರೀಗಳು ಇಂದು ಸಚಿವನಾಗಿ ಸಮಾಜ ಸೇವೆ ಮಾಡಲು ಪ್ರೇರಣೆ ನೀಡಿದರು. ಅವರ ಮಾರ್ಗದರ್ಶನದಿಂದ ದೀಪಾಂಜಲಿ ನಗರದ ಕೊಳೆಗೇರಿ ಅಭಿವೃದ್ಧಿ, ಬಾಳಯ್ಯನ ಕೆರೆ ಸಂರಕ್ಷಣೆ ಹಾಗೂ 2 ಕೋಟಿ ಸಸಿ ನೆಡುವ ಕಾರ್ಯಗಳು ಯಶಸ್ವಿಯಾದವು ಅದರಂತೆ ಅನೇಕ ವರ್ಷಗಳಿಂದ ಪಾಳು ಬಿದ್ದ ಜಾಗವನ್ನು ಸುಂದರವಾದ ಬಿ.ಜಿ.ಎಸ್.ಕ್ರೀಡಾಂಗಣ ಮಾಡಲು ಅವರ ಆಶೀರ್ವಾದವೇ ಕಾರಣ” ಎಂದು ಹೇಳಿದರು.

ಬೇಲಿಮಠದ ಶಿವರುದ್ರ ಸ್ವಾಮೀಜಿ, ಆದಿಚುಂಚನಗಿರಿ ವಿಜಯನಗರ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ, ವಿ.ಸೋಮಣ್ಣ ಪ್ರತಿಷ್ಠಾನದ‌ ಅಧ್ಯಕ್ಷೆ ಶೈಲಜಾ ವಿ.ಸೋಮಣ್ಣ, ಪದಾಧಿಕಾರಿಗಳಾದ ಬಿ.ಎಸ್.ನವೀನ್, ಅರುಣ್ ಸೋಮಣ್ಣ, ಪಾಲನೇತ್ರ, ಗೋವಿಂದರಾಜನಗರ ಬಿಜೆಪಿ ಅಧ್ಯಕ್ಷ ವಿಶ್ವನಾಥಗೌಡ ಉಪಸ್ಥಿತರಿದ್ದರು.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page