back to top
19.2 C
Bengaluru
Monday, January 26, 2026
HomeKarnatakaBengaluru Urbanಹೊತ್ತಿ ಉರಿದ BMTC ಬಸ್

ಹೊತ್ತಿ ಉರಿದ BMTC ಬಸ್

- Advertisement -
- Advertisement -

Bengaluru (Bangalore) : ಬೆಂಗಳೂರಿನ Majestic ಕೆಂಪೇಗೌಡ ಬಸ್‌ ನಿಲ್ದಾಣದಿಂದ ಶುಕ್ರವಾರ ಬೆಳಿಗ್ಗೆ ದೀಪಾಂಜಲಿನಗರಕ್ಕೆ ಹೊರಟಿದ್ದ BMTC ಬಸ್ಸಿನಲ್ಲಿ ಚಾಮರಾಜಪೇಟೆಯ (Chamrajpet) ಮಕ್ಕಳ ಕೂಟದ (Makkala Koota Park) ಬಳಿ ಬರುತ್ತಿದಂತೇ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ.

ಘಟನೆ ಬಗ್ಗೆ ವಿವರಿಸಿದ ಪೊಲೀಸರು “ಚಾಮರಾಜಪೇಟೆ ಬಳಿಯ ಮಕ್ಕಳಕೂಟ ಸಮೀಪ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದನ್ನು ಗಮನಿಸಿದ್ದ ಪ್ರಯಾಣಿಕರು ಕಿರುಚಾಡಿದ್ದರು. ಚಾಲಕ ಬಸ್‌ ನಿಲ್ಲಿಸುತ್ತಿದ್ದಂತೆ, 25 ಪ್ರಯಾಣಿಕರು ಕೆಳಗೆ ಇಳಿದಿದ್ದರು. ನಂತರ, ಬೆಂಕಿ ಹೆಚ್ಚಾಗಿ ರಸ್ತೆಯಲ್ಲಿ ಬಸ್‌ ಹೊತ್ತಿ ಉರಿದಿದ್ದರಿಂದ ರಸ್ತೆಯಲ್ಲಿ ವಾಹನಗಳ ಓಡಾಟ ಸ್ಥಗಿತಗೊಂಡಿತ್ತು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ, ಬೆಂಕಿ ನಂದಿಸಿದರು”ಎಂದು ಹೇಳಿದರು.

ಚಾಲಕನ ಮುಂಜಾಗ್ರತೆಯಿಂದ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ. ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಮುಖ್ಯ ಮೆಕ್ಯಾನಿಕಲ್ ಎಂಜಿನಿಯರ್ ತಂಡಕ್ಕೆ ಸೂಚಿಸಲಾಗಿದೆ ಎಂದು BMTC ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page