Bengaluru : ದಾಸ ಸಾಹಿತ್ಯ ಪ್ರಚಾರ ಮಾಧ್ಯಮದ ಸಹಯೋಗದಲ್ಲಿ ಶ್ರೀನಿವಾಸ ಉತ್ಸವ ಬಳಗವು ಬಸವನಗುಡಿಯ (Basavanagudi) ಉತ್ತರಾದಿ ಮಠದ ಬಳಿ ಇರುವ ಸತ್ಯಪ್ರಮೋದ ಕಲ್ಯಾಣ ಮಂಟಪದಲ್ಲಿ ಫೆಬ್ರುವರಿ 1ರಂದು ‘ಪುರಂದರದಾಸರ ಆರಾಧನಾ ಮಹೋತ್ಸವ’ (Purandaradasa Aradhana Mahotsava) ವನ್ನು ಹಮ್ಮಿಕೊಂಡಿದೆ.
ಯಲಹಂಕ ವಿಶ್ವ ಮಧ್ವ ಮಹಾ ಪರಿಷತ್ ಅವರಿಂದ ಮಧ್ಯಾಹ್ನ 3 ಗಂಟೆಗೆ ಭಜನೆ, ರೇಖಾ ಪದಕಿ ತಂಡದಿಂದ 3.30ಕ್ಕೆ ಭಜನೆ, 4ಕ್ಕೆ ಜಯನಗರದ ಹಿರಣ್ಮಯಿ ಸಂಗೀತ ಶಾಲೆ ಹಾಗೂ 4.30ಕ್ಕೆ ಸಂತವಾಣಿ ಸುಧಾಕರ್ ತಂಡದಿಂದ ಸಮೂಹ ಗಾಯನ, 5 ಗಂಟೆಗೆ ಸುವರ್ಣ ಮೋಹನ್ ತಂಡದಿಂದ ಸಮೂಹ ಗಾಯನ, ಉಡುಪಿ ಪುತ್ತಿಗೆ ಮಠದ ವಾದಿರಾಜ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಬಿ.ಗೋಪಾಲಾಚಾರ್ಯ ಅವರಿಂದ 5.30ರಿಂದ ಉಪನ್ಯಾಸ ಇರಲಿದೆ.
ಶ್ರೀನಿವಾಸ ಉತ್ಸವ ಬಳಗದ ಅಧ್ಯಕ್ಷ ಟಿ.ವಾದಿರಾಜ್ ಮಾತನಾಡಿ ‘ವೇದಿಕೆ ಕಾರ್ಯಕ್ರಮ ವನ್ನು ಜಯತೀರ್ಥ ವಿದ್ಯಾಪೀಠದ ಪ್ರಾಂಶುಪಾಲರಾದ ಸತ್ಯಧ್ಯಾನಾಚಾರ್ಯ ಕಟ್ಟಿ ಉದ್ಘಾಟಿಸಲಿದ್ದು ಅತಿಥಿಗಳಾಗಿ ಉತ್ತರಾದಿಮಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಂಡಿತ ವಿದ್ಯಾದೀಶಚಾರ್ಯ ಗುತ್ತಲ್, ಶಿಕ್ಷಣ ತಜ್ಞ ಎ.ಎಸ್.ಸಮೀರ ಸಿಂಹ, ಗಾಯನ ಸಮಾಜದ ಅಧ್ಯಕ್ಷ ಎಂ.ಆರ್.ವಿ.ಪ್ರಸಾದ್ ಭಾಗವಹಿಸಲಿದ್ದಾರೆ. ನಂತರ ಪುರಂದರದಾಸರ ನವರತ್ನ ಮಾಲಿಕೆ ಗೀತಗಾಯನ ನಡೆಯಲಿದೆ’ ಎಂದು ತಿಳಿಸಿದ್ದಾರೆ .