ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದ್ದು, ಮಳೆಯ ಕೊರತೆಯಿಂದ ಹಲವು ದಿನಸಿ ವಸ್ತುಗಳ ಬೆಲೆ ಮತ್ತಷ್ಟು ಏರಿಕೆಯಾಗಿದೆ. ಇತ್ತೀಚಿನ ಅಕಾಲಿಕ ಮಳೆಯು ತರಕಾರಿ ಬೆಲೆಯ ಮೇಲೆ ಕೂಡ ಪರಿಣಾಮ ಬೀರಿದೆ, ವಿಶೇಷವಾಗಿ ದೈನಂದಿನ ಬಳಕೆಯಲ್ಲಿ ಪ್ರಮುಖವಾದ ಟೊಮೇಟೊ ಬೆಲೆ ಗಗನಕ್ಕೇರಿದೆ.
ಟೊಮೇಟೊ ಪ್ರತಿ ಕಿಲೋಗ್ರಾಂಗೆ 80-100 ರೂಪಾಯಿಗಳಿಗೆ ಮಾರಾಟವಾಗುವುತ್ತಿದ್ದು, ಗ್ರಾಹಕರನ್ನು ದಿಗ್ಭ್ರಮೆಗೊಳಿಸಿದೆ. ಸರಿಯಾಗಿ ಮಳೆಯಾಗದೆ ಮುಂಗಾರಿನ ಕೊರತೆಯು ಮುನಿದ್ನ ದಿನಗಳಲ್ಲಿ ಬೆಳೆಗಳ ಇಳುವರಿಯಲ್ಲಿ ಕಡಿಮೆಯಾಗಬಹುದು ಎಂಬ ಕಾರಣದಿಂದ ಬೆಲೆಯಲ್ಲಿನ ಈ ತೀಕ್ಷ್ಣವಾದ ಏರಿಕೆಯು ಗ್ರಾಹಕರನ್ನು ಚಿಂತೆಗೀಡು ಮಾಡಿದೆ.