Chamarajanagara : ಚಾಮರಾಜನಗರ ಜಿಲ್ಲಾಡಳಿದಿಂದ ಮಂಗಳವಾರ ಮಡಿವಾಳ ಮಾಚಿದೇವರ ಜಯಂತಿ (Madivala Machideva Jayanthi) ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನಗರಸಭೆ ಅಧ್ಯಕ್ಷೆ ಸಿ.ಎಂ.ಆಶಾ “ಸಮಾಜದಲ್ಲಿನ ಅಸಮಾನತೆ, ಕಂದಾಚಾರ ತೊಡೆದು ಹಾಕಲು ಬಸವಣ್ಣನವರ ಜೊತೆಗೂಡಿ ಮಡಿವಾಳ ಮಾಚಿದೇವರು ಶ್ರಮಿಸಿದ್ದರು. ಅನೇಕ ವಚನಗಳ ಮೂಲಕ ಅವರು ಉತ್ತಮ ವಿಚಾರಗಳನ್ನು ಸಮಾಜಕ್ಕೆ ಧಾರೆ ಎರೆದಿದ್ದರು” ಎಂದು ಹೇಳಿದರು.
ಇತರೆ ಶರಣರಿಗಿಂತ ವಿಭಿನ್ನವಾಗಿದ್ದ ಮಡಿವಾಳ ಮಾಚಿದೇವರ ವಚನಗಳಲ್ಲಿ ತೀಕ್ಷ್ಣತೆ ಇದೆ. ಮಹಿಳೆಯರ ಸಬಲೀಕರಣದ ಬಗ್ಗೆಯೂ ಅಂದೇ ಪ್ರತಿಪಾದಿಸಿದ್ದರು ಎಂದು ಜಿ.ಪಂ. ಉಪ ಕಾರ್ಯದರ್ಶಿ ಗೂಡೂರು ಭೀಮಸೇನ ತಿಳಿಸಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಂತಮೂರ್ತಿ ಕುಲಗಾಣ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಚಂದ್ರಶೇಖರ್, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಸಮಾಜದ ಮುಖಂಡ ಸಿದ್ದಯ್ಯ , ಜಾನಪದ ಅಕಾಡೆಮಿ ಸದಸ್ಯ ಸಿ.ಎಂ.ನರಸಿಂಹಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ, ಸಮಾಜದ ಮುಖಂಡ ದುಂಡುಮಹದೇವ ಉಪಸ್ಥಿತರಿದ್ದರು.