Mumbai, India : ಹೆಸರಾಂತ ಗಾಯಕಿ ‘ಗಾನ ಕೋಗಿಲೆ’ ಲತಾ ಮಂಗೇಶ್ಕರ್ (Legendary Singer Lata Mangeshkar) ಅವರು ಭಾನುವಾರದಂದು ನಿಧನರಾದರು. ಈ ವರ್ಷದ ಆರಂಭದಲ್ಲಿ ಅವರನ್ನು Covid-19 ಮತ್ತು ನ್ಯುಮೋನಿಯಾ ಕಾರಣದಿಂದ ಲಘು ರೋಗಲಕ್ಷಣಗಳನ್ನು ಹೊಂದಿದ್ದ ಲತಾ ಮಂಗೇಶ್ಕರ್ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ (Breach Candy Hospital) ICUಗೆ ದಾಖಲಿಸಲಾಗಿತ್ತು. ಅವರ ಆರೋಗ್ಯದಲ್ಲಿ ನಿಧಾನವಾಗಿ ಚೇತರಿಕೆ ಕಂಡಿತ್ತು.
ಗಾಯಕಿಯ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆಯ ಲಕ್ಷಣಗಳನ್ನು ತೋರಿದ ನಂತರ ಜನವರಿ 28 ರ ಸುಮಾರಿಗೆ ವೆಂಟಿಲೇಟರ್‌ನಿಂದ ತೆಗೆದು ಚಿಕಿತ್ಸೆ ನೀಡಲಾಗುತ್ತಿತ್ತು. ಆದಾಗ್ಯೂ, ಫೆಬ್ರವರಿ 5 ರಂದು, ಆಕೆಯ ಸ್ಥಿತಿ ಹದಗೆಟ್ಟು ಅವರ ಉಸಿರಾಟಕ್ಕೆ ಮತ್ತೆ ವೆಂಟಿಲೇಟರ್ ಸಹಾಯ ನೀಡಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಜನವರಿ 6 ಭಾನುವಾರದಂದು ಬೆಳಿಗ್ಗೆ 8:12ಕ್ಕೆ ಅವರು ನಿಧನರಾದರು.