back to top
23 C
Bengaluru
Thursday, November 21, 2024
HomeSportsCricket1000 ನೇ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯ ಗೆದ್ದ India

1000 ನೇ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯ ಗೆದ್ದ India

- Advertisement -
- Advertisement -

Ahmedabad, Gujrat : Ahmedabad ನ Motera ದ Narendra Modi Stadium ನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ West Indies ವಿರುದ್ಧ 6 ವಿಕೆಟ್‌ಗಳಿಂದ ಜಯಗಳಿಸಿದೆ. ಈ ಗೆಲುವಿನೊಂದಿಗೆ India 1000 ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯ (ODI) ಗೆದ್ದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಟಾಸ್ ಗೆದ್ದ ಭಾರತದ ನಾಯಕ Rohit Sharma ವೆಸ್ಟ್ ಇಂಡೀಸ್ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದರು. ಭಾರತದ ಸ್ಪಿನ್ ದಾಳಿಗೆ ತತ್ತರಿಸಿದ ವೆಸ್ಟ್ ಇಂಡೀಸ್ 79 ರನ್‌ಗಳಿಗೆ 7 ವಿಕೆಟ್‌ಗಳನ್ನು ಕಳೆದುಕೊಂಡಿತು. ನಂತರ ಜೊತೆಯಾದ Jason Holder (57) ಮತ್ತು Fabian Allen (29) ಭಾರತೀಯ ಬೌಲರ್ಗಳನ್ನ ಸಮರ್ತವಾಗಿ ಎದುರಿಸಿ 78 ರನ್ ಗಳ ಜೊತೆಯಾಟವಾಡಿ ತಂಡವು ಅಲ್ಪಮೊತ್ತಕ್ಕೆ ಕುಸಿಯುವುದನ್ನು ತಪ್ಪಿಸಿದರು. ಅಂತಿಮವಾಗಿ ವಿಂಡೀಸ್ 43.5 Over ಗಳಲ್ಲಿ 176 ರನ್ ಗಳಿಗೆ ಆಲೌಟ್ ಆಯಿತು. ಭಾರತದ ಪರ Yuzvendra Chahal 4, Washington Sundar 3, Prasidh Krishna 2 ಮತ್ತು Mohammed Siraj 1 ವಿಕೆಟ್ ಪಡೆದರು.

177 ರನ್ ಗಳ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ನಾಯಕ Rohit Sharma (60) ಹಾಗೂ Ishan Kishan (28) ರ ಅಮೋಘ ಬ್ಯಾಟಿಂಗ್ ನಿಂದ ಮೊದಲನೇ ವಿಕೆಟ್ ಗೆ 84 ರನ್ ಸೇರಿಸಿದರು. ನಂತರ ಕ್ರೀಸ್ ಗಿಳಿದ Virat Kohli (8) ಮತ್ತು Rishabh Pant (11) ಹೆಚ್ಚು ಕಾಲ ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಅಂತಿಮವಾಗಿ Suryakumar Yadav (34) ಮತ್ತು Deepak Hooda (26) ರ ಸಂಯೋಜಿತ ಆಟದ ನೆರವಿನಿಂದ ಭರತ 28 Over ಗಳಲ್ಲಿ4 ವಿಕೆಟ್ ಗೆ 178 ರನ್ ಗಳಿಸಿ ಜಯಗಳಿಸಿತು. ವೆಸ್ಟ್ ಇಂಡೀಸ್ ಪರ Alzarri Joseph 2 ವಿಕೆಟ್ ಪಡೆದು ಮಿಂಚಿದರು.

Yuzvendra Chahal ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page